ಬೆಂಕಿ ಬಿದ್ದು ರಾಗಿಮೆದೆ ಸಂಪೂರ್ಣ ಭಸ್ಮ

IMG-20230123-WA0038
ಬಸರಾಳು ಸಮೀಪದ ಕೋಡಿಕೊಪ್ಪಲು ಗ್ರಾಮದಲ್ಲಿ ರಾಗಿ ಮೆದೆ ಬೆಂಕಿಯಿಂದ ಸುಟ್ಟು ಹೋಗಿರುವುದು.
Published on

ಬಸರಾಳು(ಮಂಡ್ಯ ತಾ): ಸಮೀಪದ ಕೋಡಿಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ಬೆಂಕಿ ಬಿದ್ದು ರಾಗಿ ಮೆದೆ ಸಂಪೂರ್ಣ ಸುಟ್ಟು ಹೋಗಿದೆ.

ಗ್ರಾಮದ ಬೋರೇಗೌಡ ಅವರ ಎರಡು ಎಕರೆ ಜಮೀನಿನಲ್ಲಿ ಬೆಳೆದ ರಾಗಿಯನ್ನು ಮೆದೆ ಹಾಕಲಾಗಿತ್ತು. ಆಳು ಸಿಗದ ಕಾರಣಕ್ಕೆ ರಾಗಿ ಬಡಿಸಿರಲಿಲ್ಲ. ಇನ್ನು ಮೂರು ದಿನದಲ್ಲಿ ರಾಗಿ ಬಡಿಸಬೇಕಿತ್ತು. ಅದರಂತೆ ಭಾನುವಾರ ಸಂಜೆ ಜಮೀನಿನಿಂದ ಹೋದಾಗ ಎಲ್ಲವೂ ಸರಿಯಾಗಿತ್ತು. ಆದರೆ ಸೋಮವಾರ ಮುಂಜಾನೆ ಬಂದು ನೋಡಿದಾಗ ರಾಗಿ ಬೆಳೆ ಬೆಂಕಿಗೆ ಆಹುತಿಯಾಗಿರುವುದು ಗೊತ್ತಾಗಿದೆ. ಮೆದೆಗೆ ಬೆಂಕಿ ಹೇಗೆ ತಗುಲಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಹಣಕಾಸಿನ ಸಮಸ್ಯೆಯ ನಡುವೆ ಕಷ್ಟಪಟ್ಟು ಬೆಳೆದ ರಾಗಿಯನ್ನು ಕಳೆದುಕೊಂಡು ನಷ್ಟ ಅನುಭವಿಸಿರುವ ರೈತ ಬೋರೇಗೌಡ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net