ಬೆಂಕಿ ಬಿದ್ದು ಕೊಬ್ಬರಿ ಶೆಡ್​ ನಾಶ

1
Published on

ಹೊಯ್ಸಳಕಟ್ಟೆ: ಚಿಕ್ಕನಾಯಕನಹಳ್ಳಿ ತಾಲೂಕು ಬೋರನಕಣಿವೆ ಜಲಾಶಯದ ಸಮೀಪ ಶುಕ್ರವಾರ ಕೊಬ್ಬರಿ ಶೆಡ್​ಗೆ ಬೆಂಕಿಗೆ ಆಹುತಿಯಾಗಿದೆ. ಹೊಯ್ಸಳಕಟ್ಟೆ ಗ್ರಾಮದ ನಾಗರಾಜ್​ ಅವರ ತೋಟದಲ್ಲಿ ಕೊಬ್ಬರಿ ಶೆಡ್​ ನಿರ್ಮಿಸಿದ್ದರು. ಶುಕ್ರವಾರ ಇದ್ದಕಿದ್ದಂತೆ ಬೆಂಕಿ ಬಿದ್ದು ಶೆಡ್​ನಲ್ಲಿದ್ದ 20 ಸಾವಿರಕ್ಕೂ ಅಧಿಕ ಕೊಬ್ಬರಿ, ಕೃಷಿ ಪಂಪ್​ಸೆಟ್​, ಪೈಪ್​ಗಳು, 20 ತೆಂಗಿನ ಮರಗಳು, 30 ಅಡಕೆ ಮರಗಳು ಸೇರಿ ಅನೇಕ ವಸ್ತುಗಳು ಸುಟ್ಟು ಕರಕಲಾಗಿದೆ. ತೆಂಗು ಹಾಗೂ ಅಡಕೆ ತೋಟಕ್ಕೂ ಬೆಂಕಿ ವ್ಯಾಪಿಸಿ ಹಲವು ಮರಗಳು ನಾಶವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net