ಬೆಂಕಿ ನಂದಿಸಲು ನೀರೇ ಇಲ್ಲಾ

ಚಿಕ್ಕೋಡಿ ಅಗ್ನಿಶಾಮಕ ಠಾಣೆಗೆ ಜಲಕಂಟಕ!
ಚಿಕ್ಕೋಡಿಲಿರುವ ಅಗ್ನಿಶಾಮಕ ಠಾಣೆ
ಚಿಕ್ಕೋಡಿಲಿರುವ ಅಗ್ನಿಶಾಮಕ ಠಾಣೆ
Published on: 

ಚಿಕ್ಕೋಡಿ ಅಗ್ನಿಶಾಮಕ ಠಾಣೆಗೆ ಜಲ ಸಂಕಷ್ಟ !
|ಬೆಂಕಿ ನಂದಿಸಲೂ ನೀರೇ ಇಲ್ಲ | ಬೇಕಿದೆ ಪರಿಹಾರ
ಆನಂದ ಭಮ್ಮನ್ನವರ ಚಿಕ್ಕೋಡಿ
ಮಳೆ ಅಭಾವದ ಬಿಸಿ ಜನ-ಜಾನುವಾರ, ಸರ್ಕಾರಿ ಕಚೇರಿ, ಬೆಳೆಗಳಿಗೆ ತಟ್ಟುತ್ತಿರುವುದರ ಜತೆಗೆ ಅಕಸ್ಮಿಕವಾಗಿ ಉಂಟಾಗುವ ಬೆಂಕಿ ಅವಘಡದ ವೇಳೆ ಬೆಂಕಿ ನಂದಿಸಲು ಅತ್ಯಗತ್ಯವಾಗಿ ನೀರನ್ನು ಬಳಕೆ ಮಾಡಬೇಕಿರುವ ಅಗ್ನಿ ಶಾಮಕದಳ ಠಾಣೆಗೆ ಜಲಸಂಕಷ್ಟ ಎದುರಾಗಿದೆ.
ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಹಲವು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕ ದಳ ಠಾಣೆಗೆ ಜಲ ಮೂಲವೇ ಇಲ್ಲದೇ ಪರಿಸ್ಥಿತಿ ನಿಭಾಯಿಸಲು ಇಲ್ಲಿನ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ. ಕಚೇರಿ ಬಳಿಯಿರುವ ಕೊಳವೆ ಬಾವಿಗೆ ಕಳೆದ ನಾಲ್ಕು ತಿಂಗಳಿನಿAದ ನೀರು ಬಾರದೆ ಜಲವಾಹನಗಳು ಖಾಲಿಯಾಗಿ ನಿಲ್ಲುತ್ತಿವೆ.
ನೀರಿಗಾಗಿ ೫ ಕಿ.ಮಿ ಕ್ರಮಿಸಬೇಕು:
ಚಿಕ್ಕೋಡಿ ತಾಲೂಕಿನ ೨೫ಕ್ಕೂ ಅಧಿಕ ಗ್ರಾಮಗಳಲ್ಲಿ ಉಂಟಾಗುವ ಬೆಂಕಿ ಅವಘಡಗಳ ತುರ್ತು ಪರಿಸ್ಥಿತಿಯಲ್ಲಿ ಕರೆ ಬಂದಾಗ, ಜಲವಾಹನದಲ್ಲಿ ನೀರು ತುಂಬಿಸಲು ಇಲ್ಲಿನ ಸಿಬ್ಬಂದಿ ೫ ಕಿ,ಮಿ ದೂರದ ಪುರಸಭೆಯ ಬೋರವೆಲ್‌ದಿಂದ ನೀರು ಭರಿಸಿಕೊಂಡು ಬರಬೇಕು. ಪರಿಣಾಮ ಜಲವಾಹನ ಅವಘಡ ಸಂಭವಿಸಿದ ಸ್ಥಳ ತಲುಪಲು ಸಮಯ ತೆಗೆದುಕೊಳ್ಳುತ್ತಿದೆ. ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದ್ದು ಇಲ್ಲದಂತಿರುವ ಕೊಳವೆ ಬಾವಿ:
ಅಗ್ನಿಶಾಮಕ ದಳದ ಠಾಣೆಯಲ್ಲಿ ಒಟ್ಟು ೨೫ ಸಿಬ್ಬಂದಿನ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ೧೪ ಸಿಬ್ಬಂದಿ ಕಚೇರಿ ಬಳಿಯಿರುವ ಇಲಾಖೆ ವಸತಿ ಗೃಹಗಳಲ್ಲಿ ವಾಸಿಸುತ್ತಾರೆ. ಇಲ್ಲಿರುವ ಒಂದು ಬೋರವೆಲ್ ವಸತಿ ಗೃಹಗಳ ಕುಟುಂಬದ ಬಳಕೆ ಬಳಸಲಾಗುತ್ತದೆ. ಇನ್ನೊಂದು ಬೋರವೆಲ್ ಬೇಸಿಗೆಯಲ್ಲಿ ಬತ್ತಿತ್ತು ನೀರಿಲ್ಲದೆ ಬಂದ್ ಆಗಿದೆ. ಪರಿಣಾಮ ಜಲವಾಹನಗಳು ನೀರಿಗಾಗಿ ಪುರಸಭೆ ನೀರನ್ನೇ ಅವಲಂಭಿಸಿದೆ.
ಬೇಕಿದೆ ನಿರಂತರ ನೀರು:
ಅಗ್ನಿ ಶಾಮಕ ದಳದ ಕಚೇರಿಯಲ್ಲಿ ಅಗತ್ಯವಾಗಿ ನೀರು ಇರಬೇಕಿದೆ. ಅವಗಢಗಳು ಸಂಭವಿಸಿದರೇ ನೀರಿಗಾಗಿ ಜಲವಾಹನಗಳು ೫ ಕಿ,ಮಿ ಹೋಗಿ ಅದು ವಾಹನ ಸಿಕ್ಕು ದಾಟಿ ಬರುವುದು ಬಹಳಷ್ಟು ಸಮಯ ತಗೆದುಕೊಳ್ಳುತ್ತದೆ.  ಈ ನಿಟ್ಟಿನಲ್ಲಿ ಕಚೇರಿ ಬಳಿ ಕೊಳವೆ ಬಾವಿ ಕೊರಸಲು ಸರ್ಕಾರ ಅಗತ್ಯ ಕ್ರಮವಹಿಸಬೇಕಿದೆ. ಜತೆಗೆ ಪುರಸಭೆಯಿಂದ ೨೪*೭ ನೀರಿನ ಸಂಪರ್ಕ ಕಲ್ಪಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
ಭಾಕ್ಸ
ಜನರ ಆಕ್ರೋಶ:
ಬೆಂಕಿ ಅವಘಡದ ವೇಳೆ ನೀರಿನ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಜಲವಾಹನ ತಲುಪದೆ ಇರುವುದರಿಂದ ಹಾನಿಗೊಳದ ಮಾಲೀಕರು ಸಾಕಷ್ಟು ಬಾರಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದೊಡ್ಡ ಮಟ್ಟದ ಅವಘಡದ ವೇಳೆ ಜಲವಾಹನ ನೀರು ಖಾಲಿಯಾದರೆ ಮತ್ತೆ ತುಂಬಿಸಿಕೊAಡು ಬರಲು ಸಾಕಷ್ಟು ಸಮಯ ತಗುಲುತ್ತಿದೆ. ನೀರಿನ ಅಭಾವದಿಂದ ಸಿಬ್ಬಂದಿ ಅಗ್ನಿ ಪರೀಕ್ಷೆ ಎದುರಿಸುವಂತಾಗಿದೆ.

ಕೋಟ್-
ಚಿಕ್ಕೋಡಿ ಕಚೇರಿಯ ಬಳಿ ಇರುವ ಕೊಳವೆ ಬಾವಿ ದುರಸ್ತಿ ಮಾಡಲು ಇಲಾಖೆಗೆ ಪತ್ರ ಬರೆಯಲಾಗಿದೆ. ಆದಷ್ಟೂ ಬೇಗ ದುರಸ್ತಿ ಕಾರ್ಯ ಮಾಡಲಾಗುವುದು. ಜತೆಗೆ ಇನ್ನೊಂದು ಕೊಳವೆ ಬಾವಿ ಕೊರಸಲು ಕ್ರಮ ಕೈಗೊಳ್ಳಲಾಗುವುದು.
ರಂಗನಾಥ ರಾಥೋಡ
ಡಿಎಫ್‌ಓ,ಬೆಳಗಾವಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net