ಬೆಂಕಿ ತಗುಲಿ ಸಾವು

crime
Published on

ಚಿತ್ರದುರ್ಗ:ಒಲೆ ಹಚ್ಚುವ ವೇಳೆ ಬೆಂಕಿ ತಗುಲಿ ವೃದ್ಧೆಯೊಬ್ಬರು ಅಸು ನೀಗಿದ ಘಟನೆ ಚಿತ್ರದುರ್ಗ ತಾಲೂಕು ಈಚಲನಾಗೇನಹಳ್ಳಿ ಗ್ರಾ ಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಪೂಜಮ್ಮ(70)ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಒಲೆ ಹೊತ್ತಿಸುತ್ತಿದ್ದಾಗ ವೇಳೆ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಗುಲಿ,ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಪೂಜಮ್ಮರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲವೆಂದು,ಪ್ರಕರಣ ದಾಖಲಿಸಿರುವ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net