ಬೆಂಕಿ ತಗುಲಿ ಬಾಲಕಿ ಸಾವು

Bhagyashree
Published on

ಔರಾದ್: ಮನೆಯಲ್ಲಿ ದೇವರಿಗೆ ಪೂಜೆ ಮಾಡುವಾಗ ಆಕಸ್ಮಿಕವಾಗಿ ದೀಪ ಕೈಯಿಂದ ಜಾರಿ ಮೈಮೇಲೆ ಬಿದ್ದು ಬೆಂಕಿ ತಗುಲಿ ಗಾಯಗೊಂಡಿದ್ದ ಜೋಜನಾ ಗ್ರಾಮದ ಭಾಗ್ಯಶ್ರೀ ಸುಭಾಷ ಪಡಮಪಲ್ಲೆ (15) ಬುಧವಾರ ಮೃತಪಟ್ಟಿದ್ದಾಳೆ. ಮಂಗಳವಾರ ಬೆಳಗ್ಗೆ ಈಕೆಗೆ ಬೆಂಕಿ ತಗುಲು ತೀವ್ರ ಗಾಯಗೊಂಡಿದ್ದಳು. ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಸಂತಪುರರ ಪ್ರೌಢ ಶಾಲೆಯಲ್ಲಿ ಈಕೆ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಈಕೆ ಚಿಕ್ಕಳಿರುವಾಗಲೇ ತಂದೆ ಸುಭಾಷ ಅವರು ನಿಧನ ಹೊಂದಿದ್ದರು. ಸಹೋದರ, ಸಹೋದರಿಯರು ಇಲ್ಲದ ಈ ಬಾಲಕಿ ತಾಯಿಗೆ ಏಕೈಕ ಮಗಳು. ಪ್ರತಿಭಾನ್ವಿತೆಯಾಗಿದ್ದ ಭಾಗ್ಯಶ್ರೀಯ ಆಕಸ್ಮಿಕ ಸಾವು ಪರಿವಾರದವರಿಗೆ ಘಾಸಿಗೊಳಿಸಿದೆ. ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net