

ಕಲಘಟಗಿ: ತಾಲೂಕಿನ ಮಲಕನಕೊಪ್ಪ ಗ್ರಾಮದ ಜಮೀನೊಂದರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗೋವಿನಜೋಳದ ರಾಶಿ ಸುಟ್ಟು ಕರಕಲಾದ ಘಟನೆ ಬುಧವಾರ ಮಧ್ಯರಾತ್ರಿ ಜರುಗಿದೆ.
ಗ್ರಾಮದ ರೈತ ಮಹಿಳೆ ಬಸವೆಣ್ಣೆವ್ವ ಬಸಪ್ಪ ತೆಗ್ಗಿನಮನಿ ಅವರ ಬೆಳೆ ಬೆಂಕಿಗಾಹುತಿಯಾಗಿದೆ. ಬಸವೆಣ್ಣೆವ್ವ ತಮ್ಮ 2 ಎಕರೆ ಜಮೀನಿನಲ್ಲಿ ಬೆಳೆದ ಗೋವಿನಜೋಳವನ್ನು ಕಟಾವುಗೊಳಿಸಿ ತೆನೆಗಳನ್ನು ಒಂದೆಡೆ ರಾಶಿ ಹಾಕಿದ್ದರು. ಬುಧವಾರ ರಾತ್ರಿ ಬೆಂಕಿ ತಗುಲಿದೆ. ಗುರುವಾರ ಬೆಳಗ್ಗೆ ಅಕ್ಕಪಕ್ಕದ ರೈತರು ನೋಡಿದಾಗ ಬೆಳೆಯೆಲ್ಲ ಸಂಪೂರ್ಣ ಸುಟ್ಟು ಹೋಗಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಬಸವೆಣ್ಣೆವ್ವ ತೆಗ್ಗಿನಮನಿ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.