ಬೆಂಕಿ ತಗುಲಿ ಗೃಹೋಪಯೋಗಿ ವಸ್ತುಗಳು ನಾಶ

19KDR3
ಕಡೂರಿನ ಬ್ಯಾಗಡೇಹಳ್ಳಿ ಗ್ರಾಮದಲ್ಲಿ ಮನೆಗೆ ಆಕಸ್ಮಿಕ ಬೆಂಕಿತಗುಲಿ ಮನೆ ಗೃಹೋಪಯೋಗಿ ಸಾಮಾಗ್ರಿಗಳು ಸುಟ್ಟುಕರಕಲಾಗಿರುವುದು.
Published on

ಕಡೂರು: ಬ್ಯಾಗಡೇಹಳ್ಳಿ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.
ಬ್ಯಾಗಡೇಹಳ್ಳಿ ಗ್ರಾಮದ ಮಂಜುಳಾ ಮತ್ತು ರುದ್ರಪ್ಪ ಎಂಬುವವರ ಅಕ್ಕ ಪಕ್ಕದ ಮನೆಯಲ್ಲಿ ಮಂಜುಳಾ ಎಂಬುವವರ ಮನೆಗೆ ಆಕಸ್ಮಿಕವಾಗಿ ಬೆಂಕಿತಗುಲಿ ಇಡೀ ಹೆಂಚಿನ ಮನೆ ಆವರಿಸಿಕೊಂಡು ಪಕ್ಕದ ಮನೆಗೂ ಬೆಂಕಿ ತಗುಲಿದೆ. ಕೂಡಲೇ ಅಗ್ನಿಶಾಮಕದಳ ಆಗಮಿಸಿ ಎರಡು ಮನೆಗಳ ಬೆಂಕಿ ನಂದಿಸಿದರು. ಎರಡು ಮನೆಗಳಿಂದ ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ತಿಳಿದು ಬಂದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರ ಇಲ್ಲದಾಗ ರ್ದುಘಟನೆ ಸಂಭವಿಸಿದೆ. ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಎಚ್,ಕೆ.ದೇವೇಂದ್ರಪ್ಪ, ಸಿದ್ದೇಗೌಡ, ಶಿವಪ್ರಸಾದ್, ಸಿದ್ದೇಶ್, ಬಸವರಾಜ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net