ಬೆಂಕಿ ತಗುಲಿ ಎರಡು ಲಾರಿ ಭಸ್ಮ

Published on

ಬೇಲೂರು : ಎರಡು ಲಾರಿಗಳು ಆಕಸ್ಮಿಕ ಬೆಂಕಿಗೆ ಸಿಲುಕಿ ಸಂಪೂರ್ಣ ಸುಟ್ಟು ಕರಕಲಾಗಿವೆ.

ಪಟ್ಟಣದ ತಾಲೂಕು ಕಚೇರಿ ಹಿಂಭಾಗ ಹಳೆಯದಾದ ಎರಡು ಲಾರಿಗಳನ್ನು ಅದರ ಮಾಲೀಕರು ಖಾಲಿ ಜಾಗದಲ್ಲಿ ತುಂಬ ದಿನಗಳ ಹಿಂದೆಯೇ ತಂದು ನಿಲ್ಲಿಸಿದ್ದರು. ಆದರೆ ಶನಿವಾರ ಮಧ್ಯಾಹ್ನ ನಿಂತಿದ್ದ ಲಾರಿಗಳಿಗೆ ಬೆಂಕಿ ತಗುಲಿದೆ. ಬಿಸಿಲು ಮತ್ತು ಗಾಳಿ ಹೆಚ್ಚಿದ್ದರಿಂದ ಒಂದೇ ಸಮನೇ ಎರಡು ಲಾರಿಗಳು ಹೊತ್ತಿ ಉರಿಯಲಾರಂಭಿಸಿವೆ. ಇದನ್ನು ನೋಡಿದ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಜತೆಗೆ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹರಡುವುದನ್ನೂ ತಪ್ಪಿಸಿದರು.

ಪಿಎಸ್‌ಐ ಶಿವಾನಂದ.ಜಿ.ಪಾಟೀಲ್, ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಧರ್ಮಯ್ಯ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net