ಬೆಂಕಿ ತಗುಲಿ ಎರಡು ಬಣವೆ ಭಸ್ಮ

29 upbr 2- Banivege benki
Published on

ಉಪ್ಪಿನಬೆಟಗೇರಿ: ಆಕಸ್ಮಿಕ ಬೆಂಕಿ ತಗುಲಿ 2 ಬಣವೆ ಭಸ್ಮವಾದ ಘಟನೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಮಹಾಲಿಂಗಪ್ಪ ಆಯಟ್ಟಿ ಸಹೋದರರು ತಮ್ಮ ಮನೆ ಹಿತ್ತಲಿನಲ್ಲಿ ಸಂಗ್ರಹಿಸಿದ್ದ ಒಂದು ಜೋಳದ ಕಣಿಕೆ, ಒಂದು ಹೊಟ್ಟಿನ ಬಣಿವೆ ಬೆಂಕಿಗೆ ಆಹುತಿಯಾಗಿವೆ. ಗ್ರಾಮಸ್ಥರು ಬೆಂಕಿ ನಂದಿಸಲು ನೀರು ತಂದು ಹಾಕಿದರೂ ಬಣಿವೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಬಣಿವೆಗಳು ಸುಟ್ಟು ಕರಕಲಾಗಿವೆ. ಇದರಿಂದ ವರ್ಷವಿಡೀ ಜಾನುವಾರುಗಳ ಆಹಾರಕ್ಕೇನು ಮಾಡಬೇಕು ಎಂದು ರೈತರು ಅಲವತ್ತುಕೊಂಡರು. ಅಧಿಕಾರಿಗಳು ಕೂಡಲೆ ರೈತರಿಗೆ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net