ಬೆಂಕಿ ಕೆಂಡದಲ್ಲಿ ಕಂಬಳಿ ಮೇಲೆ ಪ್ರಾರ್ಥನೆ

Praying on a blanket in the fire pit
ಮೊಹರಂ ಅಂಗವಾಗಿ ಅಗ್ನಿ ಕೆಂಡದಲ್ಲಿ ಕಂಬಳಿ ಹಾಸಿ ನಮಾಜ ಮಾಡಿ ಪವಾಡ ಮಾಡಿದ ಸಲೀಂ ಶಿರಸಗಿ.
Published on

ಮೋರಟಗಿ: ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸರ್ವ ಸಮಾಜದ ಭಕ್ತರು ಕೂಡಿ ವಿಜೃಂಭಣೆಯಿಂದ ಮೊಹರಂ ಹಬ್ಬ ಆಚರಿಸಿದರು.
ಪ್ರತಿವರ್ಷ ಬೆಳಗಿನ ಜಾವ 5 ಗಂಟೆಗೆ ಅಗ್ಗಿಕುಂಡದಲ್ಲಿ ಹಸೇನ್ ಹುಸೇನ್ ದೇವರುಗಳು ಕೆಂಡದಲ್ಲಿ ಸಂಚರಿಸುವುದು ಸಾಮಾನ್ಯವಾಗಿತ್ತು.

ಮೋರಟಗಿ ಗ್ರಾಮದ ಹಜರತ್‌ರಜಾಕಸಾಬ್ ಸೈಪನಸಾಬ ಮುಲ್ಲಾ ಅವರ ಪರಮ ಭಕ್ತ ಮಂದೇವಾಲ ಗ್ರಾಮದ ಸಲೀಂ ಶಿರಸಗಿ ಕೆಂಡದ ಮಧ್ಯದಲ್ಲಿ ಕರಿ ಕಂಬಳಿ ಹಾಸಿ ಎರಡು ರಾಕಾತ್ ನಮಾಜ ಮಾಡಿ ಭಕ್ತರ ಗಮನ ಸೆಳೆೆದರು. ಸಂಜೆ 4ಗಂಟೆಗೆ ಮುಲ್ಲಾ ಮಸೂತಿಯಿಂದ ಹಜರತ್ ಮಿಟ್ಟೆವಾಲಿ ದರ್ಗಾ ವರಗೆ ಹಜರತ್ ಹಸೇನ್ ಹುಸೇನ್ ಡೋಲಿಗಳನ್ನು ಸಾಗಿಸಿದರು.

ಡೋಲಿ ಸಾಗಿಸುವ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಹಜರತ್ ರಜಾಕ ಮುಲ್ಲಾ, ಶ್ರೀಶೈಲಗೌಡ ಪಾಟೀಲ, ಎನ್.ಆರ್. ತಿವಾರಿ, ಸಿದ್ದಣ್ಣಸಾಹು ಮಸಳಿ, ಮೈಬೂಬಸಾಬ ಕಣ್ಣಿ, ಬಂದೇನವಾಜ ಕಣ್ಣಿ, ದಾವಲಸಾಬ ಮುಲ್ಲಾ, ಎನ್.ಎನ್. ಪಾಟೀಲ, ಯುಸುಫ್ ಮುಲ್ಲಾ, ಮೈಬುಬ ಗುಲ್ಬರ್ಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net