ಬೆಂಕಿ ಉಂಡೆಯನಿಂತಾದ ಗಿರಿಜಿಲ್ಲೆ

09 ydg 02
Published on

ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ದಾಖಲೆ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಗಿರಿಜಿ¯್ಲೆ ಯಾದಗಿರಿಯಲ್ಲಿ ಬಿಸಿಲಿನ ತಾಪಮಾನ ೪೨ ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಈ ಬಿಸಿಲಿನ ಪ್ರತಾಪದ ಹೊಡೆತಕ್ಕೆ ಜನರು ಬಸವಳಿಯುವಂತಾಗಿದೆ.

ರಣಬಿಸಿಲಿನ ಕಾರಣಕ್ಕೆ ಜನರು ಮನೆಯಿಂದ ಹೊರಬರಲು ಭಯ ಪಡುವಂತಾಗಿದ್ದು, ಮುಖ್ಯ ರಸ್ತೆಗಳು ಹೊರತುಪಡಿಸಿ ಬಡಾವಣೆಗಳ ರಸ್ತೆಗಳು ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿವೆ. ಹವಾಮಾನ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ವರದಿ ಪ್ರಕಾರ ಜಿ¯್ಲÉಯಲ್ಲಿ ಕನಿಷ್ಟ ತಾಪಮಾನ ೨೨.೨ ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಟ ೪೨.೨ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಬಿಸಿಲಿನಿಂದ ಗಿರಿನಾಡು ಬಿಸಲು ನಾಡಾಗಿದೆ. ಬಿಸಿಲು ಹೆಚ್ಚಿದಂತೆ ಕೆಲವೆಡೆ ಏಕಾಏಕಿ ಗಾಳಿ, ಮಳೆಯಿಂದ ಅವಘಡಗಳಾಗುತ್ತಿವೆ.

ಒಂದು ವಾರದ ಹಿಂದೆ ೪೦ ಡಿಗ್ರಿ ಸೆಲ್ಸಿಯಸ್ ಒಳಗಡೆ ಇದ್ದ ಬಿಸಿಲಿನ ಗರಿಷ್ಟ ತಾಪಮಾನ ಕಳೆದ ಐದಾರು ದಿನಗಳಿಂದ ೪೧ ಹಾಗೂ ೪೨ ಡಿಗ್ರಿ ಸೆಲ್ಸಿಯಸ್ ಗರಿಷ್ಟ ತಾಪಮಾನ ದಾಖಲಾಗುತ್ತಿದ್ದು, ಬಿಸಿಲಿನ ತಾಪಮಾನದಿಂದ ಜನರು ಹೈರಾಣಾಗಿದ್ದು, ಮನೆಯಿಂದ ಹೊರಗಡೆ ಬರಲು ಹಿಂಜರಿಯುವAತಾಗಿದೆ.

ಬೆಳಗ್ಗೆ ಸೂರ್ಯೋದಯವಾಗುತ್ತಲೇ ಬಿಸಿಲಿನ ಹೊಡೆತ ಆರಂಭವಾಗುತ್ತಿದ್ದು, ಸೂರ್ಯಾಸ್ತದವರೆಗೂ ಝಳದ ಹೊಡೆತಕ್ಕೆ ಜನ ಜಾನುವಾರು ತತ್ತರಿಸುವಂತಾಗಿದೆ. ಈಗ ಮದುವೆ ಸಿಜನ್ ಇರುವ ಕಾರಣ ಜನರು ಎಲ್ಲಡೆ ಕಡೆ ಹೋಗಿ ಬರುವ ನಿಟ್ಟಿನಲ್ಲಿ ಹೊರಗಡೆ ಬಂದಾಗAತೂ ಬಿಸಿಲಿನ ಝಳ ತಾಳದೇ ಕಂಗಾಲಾಗುತ್ತಿದ್ದಾರೆ.

ಬೇಸಿಗೆಯ ಬಿಸಿಲ ಧಗೆಯೊಂದಿಗೆ ಬಿಸಿಗಾಳಿಯೂ ಅನುಭವ ಆಗುತ್ತಿರುವುದರಿಂದ ಬಾಯಾರಿಕೆಯೂ ಹೆಚ್ಚಿಗೆ ಆಗುತ್ತಿದೆ. ದಾಹ ತಣಿಸಲು ಜನರು ಎಳೆನೀರು, ನಿಂಬು ಶರಬತ್, ಹಣ್ಣು ಸೇರಿ ಹಲವು ತಂಪು ಪಾನೀಯಗಳು ಸೇವನೆ ಮಾಡಿ ದೇಹ ತಂಪಾಗಿಟ್ಟುಕೊಳ್ಳುವAತೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net