ಬೆಂಕಿ ಅವಡದಲ್ಲಿ ಅಪಾರ ನಷ್ಟ

24_
Published on

ತುರುವೇಕೆರೆ: ತಾಲೂಕಿನ ಬಸವನಹಳ್ಳಿ ಮತ್ತು ತಾವರೇಕೆರೆಯಲ್ಲಿ ಎರಡು ಪ್ರತ್ಯೇಕ ಅಗ್ನಿ ಅವಘಡಗಳು ಸಂಭವಿಸಿವೆ. ತಾಲೂಕಿನ ಸಾರಿಗೆಹಳ್ಳಿ ರೈತ ರವಿಕಿರಣ್​ ಟ್ರ್ಯಾಕ್ಟರ್​ನಲ್ಲಿ ರಾಗಿ ಹುಲ್ಲು ತುಂಬಿಕೊಂಡು ಸೋಮವಾರ ಮಧ್ಯಾಹ್ನ ಗ್ರಾಮಕ್ಕೆ ಸಾಗಿಸುವಾಗ ತಾಲೂಕಿನ ಬಸವನಹಳ್ಳಿ ಬಳಿ ವಿದ್ಯುತ್​ ತಂತಿಗೆ ಸ್ಪರ್ಶಿಸಿ 40 ಹೊರೆ ರಾಗಿ ಹುಲ್ಲು, ಟ್ರ್ಯಾಕ್ಟರ್​ನ ಟೈಲರ್​ ಸುಟ್ಟುಹೊಗಿದೆ. ಅದೇ ರೀತಿ ತಾವರೇಕೆರೆ ಗ್ರಾಮದ ರೈತ ರಾಮಕೃಷ್ಣ ಅವರಿಗೆ ಸೇರಿದ ಕಾಯಿ ಶೆಡ್​ಗೆ ಭಾನುವಾರ ರಾತ್ರಿ ಬೆಂಕಿ ಬಿದ್ದು ಶೆಡ್​ನಲ್ಲಿದ್ದ 31 ಸಾವಿರ ಕೊಬ್ಬರಿ ಹಾಗೂ ಶೆಡ್ಡಿನಲ್ಲಿ ನಿಲ್ಲಿಸಿದ್ದ ಮಹೇಂದ್ರ ಸ್ರ್ಟಾಂಗ್​ ಜೀರೋ ಲಗೇಜ್​ ವಾಹನ ಸುಟ್ಟಿದ್ದು, ಹಲವು ಕಂಬಗಳು ಮುರಿದಿವೆ. ತಾಲೂಕು ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಚನ್ನಾಚಾರಿ ಮತ್ತು ಸಿಬ್ಬಂದಿ ರಾಹುಲ್​ ದೊಂಬರ್​, ರಾಜು, ತೌಸೆಫ್​, ಭಗವಾನ್​, ಪ್ರದಿಪ್​, ಶಿವಕುಮಾರ್​, ಕಿರಣ್​, ಸಿರಾಜ್​ ಮತ್ತು ಗಂಗಾಧರಯ್ಯ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net