ಬೆಂಕಿ ಅನಾಹುತದಿಂದ ರಕ್ಷಣೆ ಪಡೆಯುವ ಬಗ್ಗೆ ಪ್ರಾತ್ಯಕ್ಷಕೆ

ಬೆಂಕಿ ಅನಾಹುತದಿಂದ ರಕ್ಷಣೆ ಪಡೆಯುವ ಬಗ್ಗೆ ಪ್ರಾತ್ಯಕ್ಷಕೆ
Published on

ಹೊಳೆನರಸೀಪುರ :  ಬಾಲಕಿರ ಸರ್ಕಾರಿ ಪದವಿ ಪೂರ್ವ ಕಾಲೇಜು  ವತಿಯಿಂದ ಇಂದು ಮೂಡಲ ಹಿಪ್ಪೆ ಗ್ರಾಮದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಬಾಗವಹಿಸಿದ ಅಗ್ನಿಶಾಮಕ ಠಾಣಾಧಿಕಾರಿಗಳು ಬೆಂಕಿ ಅನಾಹುತದಿಂದ ರಕ್ಷಣೆ ಪಡೆಯುವ ಬಗ್ಗೆ ಪ್ರಾತ್ಯಕ್ಷಕೆಯನ್ನು ನಡೆಸಿದರು. ಅಗ್ನಿಶಾಮಕ ಠಾಣೆಯ ಮುಖ್ಯ ಅಧಿಕಾರಿ ರಂಗನಾಥ್  ಈ ಬಗ್ಗೆ ಉಪನ್ಯಾಸ ನೀಡಿ ಪ್ರಾತ್ಯಕ್ಷಕ್ಕೆ ನಡೆಸಿಕೊಟ್ಟರು ಅವರ ಸಿಬ್ಬಂದಿ ವರ್ಗದವರು ಪ್ರಾತ್ಯಕ್ಷಿಕೆ ನಡೆಸಿಕೊಡುವಲ್ಲಿ ಸಹಕರ ನೀಡಿದರು.

 ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ದೇವರಾಜು   ಗ್ರಾಮದ ಮುಖಂಡರಾದ ದೇವರಾಜೆಗೌಡ, ಹರೀಶ್ ಬಾಬು  ಹಾಗೂ ಸಮಸ್ತ ಗ್ರಾಮಸ್ಥರು ಪಾಲ್ಗೊಂಡಿದ್ದರು. ಎನ್ಎಸ್ಎಸ್ ಕಾರ್ಯಕ್ರಮಗಳ ಕಾರ್ಯಕ್ರಮ ಅಧಿಕಾರಿ  ಕಾಂತರಾಜು ಎಲ್ಲರನ್ನೂ ಸ್ವಾಗತಿಸಿದರು. ಉಪನ್ಯಾಸಕ  ಗಿರೀಶ್  ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net