

ಬೆಂ.ಗ್ರಾಮಾಂತರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಬಿ.ಎನ್.ಕೃಷ್ಣಪ್ಪ ಅವರು 1,498 ಮತ ಪಡೆಯುವ ಜಯ ಸಾಧಿಸಿದ್ದಾರೆ.
ನಿವೃತ್ತ ಶಿಕ್ಷಕರಾದ ಬಿ.ಎನ್.ಕೃಷ್ಣಪ್ಪ ಅವರು ಪ್ರಸ್ತುತ ಸಮಾಜ ಸೇವೆ ವಿವಿಧ ಭಾಷೆ ಸಾಹಿತ್ಯಾಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಸ್ಪರ್ಧಾ ಕಣದಲ್ಲಿದ್ದ ಬಿ.ಎನ್.ಕೃಷ್ಣಪ್ಪ- 1498, ಮಹಾಲಿಂಗಯ್ಯ-1246,, ಚಿ.ಮಾ.ಸುಧಾಕರ್ 1039 ಹಾಗೂ ಲಕ್ಷ್ಮೀ ಶ್ರೀನಿವಾಸ್ 490 ಮತ ಪಡೆದುಕೊಂಡಿದ್ದು, ಅಂತಿಮವಾಗಿ ಕೃಷ್ಣಪ್ಪ 252 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಜಿಲ್ಲೆಯಯಲ್ಲಿ ಪಟ್ಟು 7,416 ಮತಗಳು ಇದ್ದು, 4,383 ಮತಗಳು ಚಲಾವಣೆಯಾಗೊದ್ದು, ಶೇ.59 ಮತದಾನವಾಗಿದೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್ ತಿಳಿಸಿದರು.