

ವಿಜಯಪುರ: ನಮ್ಮ ದೇಶ ಶಾಂತಿಗೆ ಪ್ರಸಿದ್ಧಿ ಪಡೆದಿದೆ. ನಮ್ಮ ದೇಶ ಇಡೀ ಜಗತ್ತಿನಲ್ಲಿಯೇ ದೊಡ್ಡ ಸಂವಿಧಾನ ಹೊಂದಿದೆ ಎಂದು ಸಹ ಶಿಕ್ಷಕಿ ಸಂಧ್ಯಾ ಕೌಜಲಗಿ ಹೇಳಿದರು.
ಇಲ್ಲಿನ ಕೀರ್ತಿ ನಗರದ ಶಮ್ಸ್ ಪೂರ್ವ ಪ್ರಾಥಮಿಕ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಗಣರಾಜ್ಯೋತ್ಸವದಲ್ಲಿ ಶಾಲಾ ಸಂಯೋಜಕ ದೀಲಿಪ ಚೌಧರಿ ಅವರೊಂದಿಗೆ ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೈಹಿಕ ಶಿಕ್ಷಕ ರವಿಕುಮಾರ ವಾಡಕರ ಅವರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶ್ರೀನಿವಾಸ ಪಾಟೀಲ, ಹೀನಾ ಮುಲ್ಲಾ, ಸೋನಂ ದರಬಾರ ಮತ್ತಿತರರಿದ್ದರು.