ಬೃಹತ್ ರಾಷ್ಟ್ರ ಧ್ವಜ ರ‍್ಯಾಲಿ 15ರಂದು

NALKU CHAKRA
Published on

ಕಲಬುರಗಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಆ.15ರಂದು ಹಮ್ಮಿಕೊಂಡಿರುವ 750 ಮೀಟರ್ ಉದ್ದದ ರಾಷ್ಟ್ರಧ್ವಜದ ಮೆರವಣಿಗೆಯ ಕರಪತ್ರ ಹಾಗೂ ಭಿತ್ತಿ ಪತ್ರಗಳನ್ನು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ, ಮಾತೋಶ್ರೀ ಶ್ರೀ ಡಾ.ದಾಕ್ಷಾಯಣಿ ಅಪ್ಪ ಬಿಡುಗಡೆ ಮಾಡಿದರು.

ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಮಾತನಾಡಿ, ತಿರಂಗ ರ‍್ಯಾಲಿಗೆ ಎಲ್ಲರೂ ಸಹಕರಿಸಿ, ಕಲಬುರಗಿಯ ಕೀರ್ತಿ ರಾಷ್ಟ್ರ ಮಟ್ಟದವರೆಗೆ ತಲುಪಬೇಕು. ನಗರದ ವಿದ್ಯಾರ್ಥಿಗಳು, ಯುವ ಸಂಘ, ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. 75ನೇ ಸ್ವಾತಂತ್ರ್ಯೋತ್ಸವ ದೇಶದ, ನಮ್ಮ ಮನೆಯ ಹಬ್ಬ. ಅದನ್ನು ಬೃಹತ್ ರಾಷ್ಟ್ರ ಧ್ವಜಾರೋಹಣದೊಂದಿಗೆ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಈ ರ‍್ಯಾಲಿ ಮೂಲಕ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಸ್ವಾತಂತ್ರ್ಯ ವೀರರಿಗೆ ನಮನಗಳನ್ನು ಸಲ್ಲಿಸಬೇಕು ಎಂದರು.

ನಾಲ್ಕು ಚಕ್ರ ತಂಡದ ಮಾಲಾ ಕಣ್ಣಿ, ಮಾಲಾ ದಣ್ಣೂರ ಮಾತನಾಡಿ, ಆ.15ರಂದು ಬೆಳಗ್ಗೆ 9ಕ್ಕೆ ಶರಣಬಸವೇಶ್ವರ ದೇವಸ್ಥಾನದಿಂದ ಸರ್ದಾರ್ ವಲ್ಲಭಭಾಯಿ ವೃತ್ತದವರೆಗೆ ರ‍್ಯಾಲಿ ನಡೆಯಲಿದೆ. ನಗರ ಸೇರಿ ಜಿಲ್ಲೆಯ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು ಸಾಥ್ ನೀಡಬೇಕು ಎಂದು ಮನವಿ ಮಾಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ನಾಲ್ಕು ಚಕ್ರದ ಕಲ್ಯಾಣರಾವ ಪಾಟೀಲ್, ಮಹೇಶ್ಚಂದ್ರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net