

ಚಿಕ್ಕಮಗಳೂರು: ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ಬ್ರಹ್ಮಕುಮಾರಿ ದಾದಿ ಡಾ. ಪ್ರಕಾಶ್ ಮಣಿಜೀ ಅವರ ೧೮ನೇ ಪುಣ್ಯ ಸ್ಮÊತಿ ದಿನದ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನ-೨೦೨೫ನ್ನು ಆ. ೨೪ರಂದು ಭಾನುವಾರ ಬೆಳಗ್ಗೆ ೯.೩೦ ರಿಂದ ಸಂಜೆ ೪.೩೦ ರವರೆಗೆ ನಗರದ ಟಿಎಂಎಸ್ ಆವರಣದ ರೋಟರಿ ಹಾಲ್‌ನಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಜಾಪಿತಾ ಬ್ರಹ್ಮಕುಮಾರೀಸ್ ಸಂಚಾಲಕಿ ರಾಜಯೋಗಿನಿ ಬಿ.ಕೆ. ಭಾಗ್ಯಕ್ಕ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಚ್.ಡಿ. ತಮ್ಮಯ್ಯ ನೆರೆವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ನಗರಸಭಾಧ್ಯಕ್ಷೆ ಶೀಲಾದಿನೇಶ್ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಎಸ್‌ಪಿ ಡಾ. ವಿಕ್ರಮ ಅಮಟೆ, ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್, ರೋಟರಿ ಸಂಸ್ಥೆಯ ಅಧ್ಯಕ್ಷ ಲಿಖಿತ್, ಹೋಲಿಕ್ರಾಸ್ ಆಸ್ಪತ್ರೆಯ ಆಡಳಿತಾಧಿಕಾರಿ ಲೂಸೀಜಾನ್, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಪ್ರದೀಪ್‌ಗೌಡ, ಜೆಸಿಐ ಅಧ್ಯಕ್ಷ ಪ್ರದೀಪ್ ಕೋಟೆ, ಜಿಲ್ಲಾಧ್ಯಕ್ಷ ಡಾ. ಕೆ.ಎ. ಅನಿತ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಆ. ೨೨ ರಿಂದ ೨೫ ರವರೆಗೆ ಭಾರತ ಮತ್ತು ನೇಪಾಳದಲ್ಲಿ ಬೃಹತ್ ರಕ್ತದಾನ ಅಭಿಯಾನವನ್ನು ಆಯೋಜಿಸಲಾಗಿದ್ದು, ಅದರ ಭಾಗವಾಗಿ ಜಿಲ್ಲೆಯ ತರೀಕೆರೆಯಲ್ಲಿ ಆ. ೨೨ರಂದು, ಮೂಡಿಗೆರೆಯಲ್ಲಿ ಆ. ೨೩, ಚಿಕ್ಕಮಗಳೂರು ನಗರದಲ್ಲಿ ಆ. ೨೪ ರಂದು ರಕ್ತದಾನ ಅಭಿಯಾನ ನಡೆಯಲಿದೆ ಎಂದರು.
ರೋಟರಿ, ರೆಡ್‌ಕ್ರಾಸ್, ಜೆಸಿಐ, ಲಯನ್ಸ್, ಹೋಲಿಕ್ರಾಸ್ ಆಸ್ಪತ್ರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿವೇಕ ಜಾಗೃತಿ ಬಳಗ, ಭೂಮಿಕ ಟಿವಿ, ಕನ್ನಡ ಸೇನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅನುವ್ರತ್ ಸಮಿತಿ, ಕನ್ನಡ ಜಾನಪದ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿ, ಯುವಜನರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್ ರಕ್ತದಾನ ಅಭಿಯಾನದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಮನವಿ ಮಾಡಿದರು.
ಬ್ರಹ್ಮಕುಮಾರೀಸ್ ಸಂಸ್ಥೆ ಇಂದು ವಿಶ್ವದಾದ್ಯಂತ ೧೪೭ಕ್ಕೂ ಹೆಚ್ಚು ರಾಷ್ಟçಗಳಲ್ಲಿ ವ್ಯಾಪಕವಾಗಿ ತನ್ನ ಸೇವೆಯನ್ನು ವಿಸ್ತರಿಸಿದ್ದು, ೧೯೩೬-೧೯೬೯ ರವರೆಗೆ ಸಂಸ್ಥೆಯನ್ನು ನಡೆಸಿ ೧೮.೦೧.೧೯೬೯ ರಂದು ತಮ್ಮ ಸಂಪೂರ್ಣತೆಯನ್ನು ಪಡೆದು ಡಾ. ದಾದಿ ಪ್ರಕಾಶ್ ಮಣಿಜೀ ಅವರು ಅವ್ಯಕ್ತರಾದರು ಎಂದು ತಿಳಿಸಿದರು.
ದಾದಿಜೀ ಅವರಿಗೆ ವಿಶ್ವಸಂಸ್ಥೆ ೬ ಬಾರಿ ಶಾಂತಿದೂತ ಬಿರುದನ್ನು ನೀಡಿ ಗೌರವಿಸಿದೆ. ಉದಯಪುರ ಮೋಹನ್‌ಲಾಲ್ ಸುಕಾಡಿಯಾ ವಿಶ್ವವಿದ್ಯಾಲಯ ಇವರನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಅನಿತ್‌ಕುಮಾರ್, ಜಿ.ರಮೇಶ್, ನಂದಕುಮಾರ್, ಗೋಪಿಕೃಷ್ಣ, ಬಿ.ಎನ್. ವೆಂಕಟೇಶ್, ಲಿಖಿತ್ ಎನ್.ಪಿ ಮತ್ತಿತರರು ಉಪಸ್ಥಿತರಿದ್ದರು.