ಬೃಹತ್ ಚಿತ್ರ ಸಂತೆ ಜ.14ರಂದು

art
Published on

ಕಲಬುರಗಿ: ನಮ್ಮ ಭಾಗದ ಪ್ರತಿಭಾವಂತ ಕಲಾವಿದರಿಂದ ರೂಪುಗೊಂಡಿರುವ ಚಿತ್ರ, ಕಲಾ ಕೃತಿಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಜ.14ರಂದು ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಿಂದ ಮಹಾನಗರ ಪಾಲಿಕೆ ಗೇಟ್‌ವರೆಗೆ ಒಂದು ದಿನದ ಚಿತ್ರಸಂತೆ ಏರ್ಪಡಿಸಲಾಗಿದೆ ಎಂದು ಪ್ರಧಾನ ಸಂಯೋಜಕ ಡಾ.ಎ.ಎಸ್.ಪಾಟೀಲ್, ಸಂಯೋಜಕ ಡಾ.ಪರಶಸುರಾಮ ಪಿ.ತಿಳಿಸಿದರು.
ವಿಕಾಸ ಅಕಾಡೆಮಿ, ಚೈತನ್ಯಮಯಿ ಟ್ರಸ್ಟ್, ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ, ಗುವಿವಿ, ಕರ್ನಾಟಕ ಕೇಂದ್ರೀಯ ವಿವಿ, ದಿ ಆರ್ಟ್ ಇಂಟಿಗ್ರೇಶನ್ ಸೊಸೈಟಿ, ಕೆಕೆಸಿಸಿಐ ಬಿಸಿಲು ಆರ್ಟ್ ಗ್ಯಾಲರಿ, ಶರಣಬಸವ ವಿವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸಂತೆ ನಡೆಯಲಿದ್ದು, ಹಿರಿಯ, ಯುವ ಕಲಾವಿದರು. ಕಲಾ ವಿದ್ಯಾರ್ಥಿಗಳು ಸೇರಿ ವೈವಿಧ್ಯಮಯ ಮಾಧ್ಯಮದ ಚಿತ್ರಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಧಕ ಕಲಾವಿದರನ್ನು ಸನ್ಮಾನಿಸಲಾಗುವುದು. ಬಸವರಾಜ ದೇಶಮುಖ ಉದ್ಘಾಟಿಸಲಿದ್ದು, ವಿಕಾಸ ಅಕಾಡೆಮಿ ಅಧ್ಯP್ಷÀ ಡಾ.ಬಸವರಾಜ ಪಾಟೀಲ ಸೇಡಂ ಉಪಸ್ಥಿತರಿರಲಿದ್ದಾರೆ. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ ಮತ್ತಿಮಡು, ಎಂಎಲ್ಸಿ ಶಶೀಲ್ ನಮೋಶಿ, ಗುವಿವಿ ಕುಲಪತಿ ಡಾ.ದಯಾನಂದ ಅಗಸರ, ಕೆಕೆಸಿಸಿಐ ಅಧ್ಯP್ಷÀ ಶಶಿಕಾಂತ ಪಾಟೀಲ್, ಸಿಯುಕೆಯ ಡಾ.ವಿಕ್ರಮ್ ವಿಸಾಜಿ, ದತ್ತಪ್ಪ ಸಾಗನೂರ ಅತಿಥಿಗಳಾಗಿ ಭಾಗವಹಿಸಲಿದ್ದು, ಡಾ.ಎ.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಎಂ.ಎಚ್.ಬೆಳಮಗಿ, ವಿ.ಬಿ.ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net