

ಕೊಡಗು : ನಾಪೋಕ್ಲು ಸಮೀಪದ ಚೇರಂಬಾಣೆಯಲ್ಲಿದ್ದ ಬೃಹತ್ ಕಾಳಿಂಗಸರ್ಪವನ್ನು ಪೊನ್ನೀರ ಸ್ನೆಕ್ ಗಗನ್ ಶುಕ್ರವಾರ ರಕ್ಷಿಸಿದ್ದಾರೆ. ಚೇರಂಬಾಣೆಯ ಬಿ.ಬಾಡಗದ ಕೂಡಕಂಡಿ ಅಪ್ಪಣ್ಣ ಅವರ ಗದ್ದೆಯಲ್ಲಿ ಕಾಳಿಂಗ ಸರ್ಪ ಇರುವುದಾಗಿ ಭಾಗಮಂಡಲದ ಅರಣ್ಯಾಧಿಕಾರಿ ಮಂಜುನಾಥ್ ನಾಯ್ಕ ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಉರಗ ಸಂರಕ್ಷಕ ಪೊನ್ನೀರ ಸ್ನೇಕ್ ಗಗನ್, 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನಿಂದ ಪಟ್ಟಿ ರಕ್ಷಿತಾರಣ್ಯಕ್ಕೆ ಬಿಟ್ಟರು.
ಸ್ನೇಕ್ ಗಗನ್ ಮಾತನಾಡಿ, ಹಾವುಗಳನ್ನು ಕಂಡರೆ ಯಾರೂ ಕೊಲ್ಲಬೇಡಿ. ವಿಶೇಷವಾಗಿ ಕಾಳಿಂಗ ಸರ್ಪ ಕಂಡುಬಂದರೆ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ. ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದರು.