ಬೃಹತ್ ಉದ್ಯೋಗಮೇಳ 16ರಂದು - ಸಿ.ಆರ್.ಶೆಟ್ಟಿ

job
Published on

ಹುಕ್ಕೇರಿ: ಇಲ್ಲಿನ ಎಸ್‌ಕೆ ಪಬ್ಲಿಕ್ ಸಿಬಿಎಸ್ ಶಾಲೆ ಆವರಣದಲ್ಲಿ ನ.16 ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಿ.ಆರ್.ಶೆಟ್ಟಿ ೌಂಡೇಶನ್ ಅಧ್ಯಕ್ಷ ಸಿ.ಆರ್.ಶೆಟ್ಟಿ ಹೇಳಿದರು.

ಇಲ್ಲಿನ ಎಸ್‌ಕೆ ಹೈಸ್ಕೂಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಎಸ್‌ಎನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹುಕ್ಕೇರಿ, ಸಿ.ಆರ್.ಶೆಟ್ಟಿ ೌಂಡೇಶನ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಾದರಿ ವೃತಿ ಕೇಂದ್ರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯೋಗಾಧಾರಿತ ತರಬೇತಿ ಕೇಂದ್ರ ಹಾಗೂ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಅಂದಾಜು 30ಕ್ಕಿಂತ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 3 ಸಾವಿರ ಉದ್ಯೋಗಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿದ ಅರ್ಹ ಅಭ್ಯರ್ಥಿಗಳು ಸ್ವ-ವಿವರ (ಬಯೋಡಾಟಾ) ದೊಂದಿಗೆ ಭಾಗವಹಿಸಬಹುದು ಅಥವಾ ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಿಎಸ್ ತುಬಚಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅನಿಲ ಶೆಟ್ಟಿ, ಓಂಕಾರ ಹೆದ್ದೂರಶೆಟ್ಟಿ, ರಾಜಶೇಖರ ಮುಚ್ಚಂಡಿ, ಚನ್ನಪ್ಪ ಗಜಬರ, ರವಿ ಪರಕನಟ್ಟಿ, ಸೋಮ ಪರಕನಟ್ಟಿ, ಬಸವರಾಜ ನಂದಿಕೋಲಮಠ, ಶಿವರಾಜ ನಾಯಿಕ, ಗಿರೀಶ ಪಾಟೀಲ, ಮಹಾಂತೇಶ ವಸದ, ವೀರೇಶ ಗಜಬರ, ಸಂತೋಷ ನಾವಲಗಿ, ಪ್ರಾಚಾರ್ಯ ಡಾ.ಸರ್ವಮಂಗಳಾ ಕಮತಗಿ, ಸುಭಾಸ ಗಸ್ತಿ, ಶಂಕರ ಅಲಗರಾವುತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net