ಬೃಹತ್ ಆರೋಗ್ಯ ಮೇಳ ೨೧ರಂದು

1307 DORANAHALLI 01
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ದೋರನಹಳ್ಳಿ: ಸರ್ಕಾರಿ ಮಹಿಳಾ ನೌಕರರ ಸಂಘದಿAದ ದೋರನಹಳ್ಳಿಯಲ್ಲಿ ಜು.೨೧ರಂದು ಬೃಹತ್ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಚಂದ್ರಕಲಾ ಗೂಗಲ್ ತಿಳಿಸಿದರು.

ಈ ಕುರಿತು ಗ್ರಾಮದ ಸಿಎಚ್‌ಸಿಯಲ್ಲಿ ಶನಿವಾರ ಸಂಜೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೂಲಿ ಕಾರ್ಮಿಕರು ಮತ್ತು ಬಡ ಜನರ ಹಿತಕ್ಕಾಗಿ ವಿವಿಧ ಗಂಭೀರ ರೋಗಗಳ ಉಚಿತ ತಪಾಸಣೆಗಾಗಿ ಈ ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಹೀಗಾಗಿ ಸುತ್ತಮುತ್ತಲಿನ ಗ್ರಾಮದ ಬಡ ಮತ್ತು ಕೂಲಿಕಾರ್ಮಿಕರು ಸೇರಿ ಆರೋಗ್ಯದ ಗಂಭೀರ ಸಮಸ್ಯೆ ಇರುವವರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಯಾದಗಿರಿ ಜಿಲ್ಲಾ ಸರ್ಕಾರಿ ಮಹಿಳಾ ನೌಕರರ ಸಂಘ ಇತ್ತೀಚೆಗೆ ಸ್ಥಾಪನೆಯಾಗಿದ್ದು, ಈ ಸಂಘದಡಿ ಜನಯುಪಯೋಗಿ ಕಾರ್ಯ ಮಾಡುವ ಉz್ದೆÃಶದಿಂದ ಪ್ರಥಮ ಬಾರಿಗೆ ಈ ಶಿಬಿರ ಆಯೋಜಿಸಲಾಗಿದೆ. ಮಹಿಳೆಯರು ಎದುರಿಸುವ ಗಂಭೀರವಾದ ಗರ್ಭಕಂಠ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕೋಶದ ಇತರೆ ಸಮಸ್ಯೆ ಸೇರಿ ಉಳಿದಂತೆ ಸಾಮನ್ಯವಾಗಿ ಬಾಯಿ ಕ್ಯಾನ್ಸರ್, ದೃಷ್ಟಿ ಹೀನತೆ, ದಂತ ಸಮಸ್ಯೆ, ಬಿಪಿ, ಶುಗರ್ ಜತೆ ಜನಸಂಖ್ಯಾ ನಿಯಂತ್ರಣ ಕುರಿತು ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುವುದು ಎಂದರು.

ಈ ಆರೋಗ್ಯ ಶಿಬಿರಕ್ಕೆ ಇಂಡಿಯನ್ ಕ್ಯಾನ್ಸರ್ ಸೋಸೈಟಿ ಕಲಬುರ್ಗಿ ವಿಭಾಗ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ದೋರನಹಳ್ಳಿ, ಸರ್ಕಾರಿ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದಿAದ ಕರ‍್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಕ್ಯಾನ್ಸರ್ ರೋಗಕ್ಕೆ ಸಂಬAಧಿಸಿದAತೆ ಕಲಬುರಗಿ ಕಿದ್ವಾಯಿನಿಂದ ಅಗತ್ಯ ಸಲಕರಣೆ ಹಾಗೂ ಸಿಬ್ಬಂದಿ ಬರಲಿದ್ದಾರೆ. ಸ್ತಿçà ರೋಗ ತಜ್ಞೆ ಡಾ.ನೀಲಾಂಬಿಕ, ಗರ್ಭಕೋಶ ತಜ್ಞೆ ಡಾ.ರಾಜೇಶ್ವರಿ ಗುತ್ತೇದಾರ್, ಶಸ್ತç ಚಿಕಿತ್ಸಕ ಹಾಗೂ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಮಲ್ಲನಗೌಡ ಪಾಟೀಲ್, ಜನಸಂಖ್ಯಾ ನಿಯಂತ್ರಣ ತಜ್ಞೆ ಡಾ.ಜ್ಯೋತಿ ಕಟ್ಟಿಮನಿ ಸೇರಿ ಹೃದಯ ತಜ್ಞ ಡಾ.ಅರುಣ ಸಿದ್ರಿ ಸೇರಿ ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಮತ್ತು ತಪಾಸಣೆ ಮಾಡಲಿದ್ದಾರೆ ಎಂದರು.

ಇದಲ್ಲದೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಪಂಚಾಯತ ರಾಜ್ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಪತ್ರಕರ್ತರ ಸಂಘ, ಹಳೆ ವಿದ್ಯಾರ್ಥಿಗಳ ಸಂಘದ ವಿವಿಧ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಈ ವೇಳೆ ಸಭೆಯಲ್ಲಿ ಸಿಎಚ್‌ಸಿ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಗುತ್ತೇದಾರ್, ಸಂಘದ ಸದಸ್ಯರಾದ ಹಯ್ಯಾಳಪ್ಪ ಗುಂಟನೂರ, ಅಮರೀಶ ಗೋಲಗೇರಿ, ಮಂಜುನಾಥ ಕಂಚಗಾರ, ವಿಶಾಲಕುಮಾರ ಶಿಂಧೆ, ದೇವೆಂದ್ರ ಮಲಗೊಂಡ, ಮಹೇಶ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net