ಬೂದುಬಾಳು ಗ್ರಾಮದಲ್ಲಿ ವಿಜೃಂಭಣೆಯ ಪಲ್ಲಕ್ಕಿ ಉತ್ಸವ

09 HANUR 1.
ಹನೂರು ಸಮೀಪದ ಬೂದುಬಾಳು ಗ್ರಾಮದ ಶ್ರೀ ವೆಂಕಟರಮಣಸ್ವಾಮಿ ಜಾತ್ರೆಯಲ್ಗಿ ಪಲ್ಲಕ್ಕಿ ಉತ್ಸವವು ವಿಜೃಭಂಣೆಯಿಂದ ನೆರವೇರಿತು.
Published on

ಹನೂರು: ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸಮೀಪದ ಬೂದುಬಾಳು ಗ್ರಾಮದಲ್ಲಿ ಬುಧವಾರ ರಾತ್ರಿ ಪಲ್ಲಕ್ಕಿ ಉತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಹಿನ್ನೆಲೆಯಲ್ಲಿ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಲಾಯಿತು. ದೇವಸ್ಥಾನದ ಧರ್ಮಾಧಿಕಾರಿ ನೇತೃತ್ವದಲ್ಲಿ ಭಕ್ತರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ರಾತ್ರಿ 9ಕ್ಕೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಹೊರವಲಯದಲ್ಲಿರುವ ದೇವರಗುಡಿ ತಲುಪಿತು.

ಬಳಿಕ ಮಂಟಪದಲ್ಲಿ ಮೂರ್ತಿಯನ್ನು ಕೂರಿಸಿ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬಳಿಕ ದೇವರನ್ನು ದೇವಸ್ಥಾನಕ್ಕೆ ಕರೆತರಲಾಯಿತು. ರಾತ್ರಿ ಮಂಡ್ಯದ ಕಾಸರವಾಡಿ ಸಚಿನ್ ತಂಡವರಿಂದ ಹರಿಕಥೆ ಆಯೋಜಿಸಿದ್ದರು. ಭಕ್ತರು ಬೀಡು ಬಿಟ್ಟಿದ್ದರು.

ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ತಮಟೆಯ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರಲ್ಲದೆ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net