ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

23 SARAG 1
ಸರಗೂರು ಪಟ್ಟಣದಲ್ಲಿ ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸುವ ಮೂಲಕ ಬೂತ್ ವಿಜಯ ಅಭಿಯಾನಕ್ಕೆ ಡಾ.ಎಚ್.ವಿ.ಕೃಷ್ಣಸ್ವಾಮಿ ಚಾಲನೆ ನೀಡಿದರು. ರಾಧಿಕಾ ಶ್ರೀನಾಥ್, ವಿನಾಯಕ ಪ್ರಸಾದ್, ನಾಗರಾಜರಾಮ, ಪ್ರಸನ್ನ, ರಾಜೇಶ್, ರಾಮು, ಭರತ್, ನೂರಾಳ್‌ಸ್ವಾಮಿ, ನವೀನ್, ರಾಮುಲು ಇದ್ದರು.
Published on

ಸರಗೂರು: ಪಟ್ಟಣದಲ್ಲಿ ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸುವ ಮೂಲಕ ಬೂತ್ ವಿಜಯ ಅಭಿಯಾನಕ್ಕೆ ಸೋಮವಾರ ಮುಖಂಡ ಡಾ.ಎಚ್.ವಿ.ಕೃಷ್ಣಸ್ವಾಮಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಹಿಂದುಳಿದ ತಾಲೂಕು ಅಭಿವೃದ್ಧಿಗೆ ಈ ಬಾರಿ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು. ಆ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಮುಂದಾಗಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿಗೆ ಭದ್ರಬುನಾದಿ ಹಾಕಿ ಹೋಗಿದ್ದು ಅದರಂತೆ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಬಿಜೆಪಿ ನಗರಾಧ್ಯಕ್ಷ ನಾಗರಾಜ ರಾಮ, ಕಾರ್ಯದರ್ಶಿ ರಾಜೇಶ್, ರಾಮು, ಪ್ರಸನ್ನ, ಭರತ್, ನೂರಾಳ್‌ಸ್ವಾಮಿ, ನವೀನ್, ರಾಮುಲು ಚಂದ್ರಹಾಸ್, ಗೋಪಿ, ಶ್ರೀವತ್ಸ, ಜಿ.ಸಿದ್ದು, ಮೂರ್ತಿ, ಶ್ರೀನಾಥ್, ಪ್ರಕಾಶ್, ಗೋಪಾಲಯ್ಯ, ಶಿವಕುಮಾರ್, ಶಿವು, ರಾಜು, ಮಲ್ಲೇಗೌಡ, ವಿರಾಜನಾಯಕ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net