ಬುಸ್ತೇನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ವ್ಯಕ್ತಿಯ ಕೊಲೆ ಆರೋಪಿ ಬಂಧನ

ಬುಸ್ತೇನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ವ್ಯಕ್ತಿಯ ಕೊಲೆ ಆರೋಪಿ ಬಂಧನ
Published on

ಹಾಸನ : ಜಿಲ್ಲೆಯಲ್ಲಿ ನಡೆದ ಎರೆಡು ಕೊಲೆ ಪ್ರಕರಣದಲ್ಲಿ ಮೂರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜಿತಾ ಅವರು ತಿಳಿಸಿದರು.
ನಗರದ ಬುಸ್ತೇನಹಳ್ಳಿ ರೈಲ್ವೆ ಟ್ರ್ಯಾಕ್ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ಮತ್ತು ಪೂಮಗಾಮೆ ಗ್ರಾಮದಲ್ಲಿ ತಂದೆಯನ್ನೇ ಹತ್ಯೆ ಪ್ರಕರಣದ ಮೂರು ಆರೋಪಿಗಳಾದ ಅಣ್ಣಯ್ಯ (24) ಮತ್ತು ಸುದೀಪ (27) ಎಂಬುವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
ನಗರದ ಬುಸ್ತೇನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುತ್ತಾನೆ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುವು ತನಿಖೆಯಲ್ಲಿ ತಿಳಿದುಬಂದಿದೆ.
ಅರಸೀಕೆರೆ ತಾಲ್ಲೂಕು ತೂಬಿನಕೆರೆ ಭೋವಿ ಕಾಲೋನಿಯ ಜಯಪ್ಪ (34) ಮೃತ ವ್ಯಕ್ತಿ ಎಂದು ಗುರುತಿಸಿದ್ದು, ಕಲೆ ಕಾಳೇನಹಳ್ಳಿ ಹಟ್ಟಿಯ ಅಣ್ಣಯ್ಯ (24) ಕೊಲೆ ಆರೋಪಿ.
ಫೆ. 2ರಂದು ಬುಸ್ತೇನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಗರ ಬಡಾವಣೆ ಠಾಣೆ ಪೊಲೀಸರು ವಾರಸುದಾರರ ಪತ್ತೆಗಾಗಿ ಇತರೆ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಈ ನಡುವೆ ಫೆ.3 ರಂದು ನನ್ನಿ ಎಂಬ ಮಹಿಳೆ ಅರಸೀಕೆರೆ ಗ್ರಾಮಾಂತರ ಠಾಣೆಗೆಯಲ್ಲಿ ಮಗ ಜಯಪ್ಪ, ನ್ಯಾಯಾಲಯಕ್ಕೆ ಹೋಗಿ ಬರುವುದಾಗಿ ಹಾಸನಕ್ಕೆ ಹೋದವನು ವಾಪಾಸ್ ಬಂದಿಲ್ಲವೆಂದು ದೂರು ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಹತ್ಯೆಯಾದ ವ್ಯಕ್ತಿ ಮಹಿಳೆಯ ಮಗನೇ ಎಂಬುದು ಪತ್ತೆಯಾಗಿದೆ.
ಮದ್ಯ ಕುಡಿಸಿ ಹತ್ಯೆ:
ಮಹಿಳೆಯ ಅಪ್ರಾಪ್ತೆ ಮೊಮ್ಮಗಳನ್ನು ಆರೋಪಿ ಅಣ್ಣಯ್ಯ ಅಪಹರಿಸಿದ್ದ. ಈ ಬಗ್ಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೋಕ್ಸೋ ಕಾಯ್ದೆಯಡಿ ಅಣ್ಣಯ್ಯ 2021 ಆ.30 ರಂದು ಜೈಲು ಸೇರಿ, 2022 ಜು.14 ರಂದು ಬಿಡುಗಡೆಯಾಗಿದ್ದ. ಆ ಪ್ರಕರಣದಲ್ಲಿ ಸಾಕ್ಷಿ ನುಡಿಯಲು ಜಯಪ್ಪ ಆಗಾಗ ನ್ಯಾಯಾಲಯಕ್ಕೆ ಹೋಗುತ್ತಿದ್ದ. ನ್ಯಾಯಾಲಯದಲ್ಲಿ ಶಿಕ್ಷೆ ಆಗಬಹುದೆಂದು ಭಾವಿಸಿದ್ದ ಆರೋಪಿ, ಜಯಪ್ಪನ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಜ.31 ರಂದು ಹಾಸನ ನ್ಯಾಯಲಯಕ್ಕೆ ಸಾಕ್ಷಿ ನುಡುಯಲು ಬಂದಿದ್ದ ಜಯಪ್ಪನನ್ನು ಭೇಟಿಯಾದ ಆರೋಪಿ, ಮಾತನಾಡಲೆಂದು ಬುಸ್ತೇನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿಗೆ ಕರೆದುಕೊಂಡು ಹೋಗಿ ಮದ್ಯೆ ಕುಡಿಸಿ, ಗುರುತು ಪತ್ತೆಯಾದ ರೀತಿ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿ ನಾಪತ್ತೆಯಾಗಿದ್ದ. ತನಿಖೆ ನಡೆಸಿದ ಪೊಲೀಶರು ಆರೋಪಿ ಅಣ್ಣಯ್ಯನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net