ಬುರ್ಖಾ ಧರಿಸಿ ಬಂದು ಕಳ್ಳತನ

Crime Logo
Published on

ಕಲಬುರಗಿ: ನಗರದ ಚಿನ್ನದ ಮಳಿಗೆಯಲ್ಲಿ ಚಿನ್ನ ಖರೀದಿ ಮಾಡುವ ನೆಪದಲ್ಲಿ ಬಂದ ಮಹಿಳೆಯೊಬ್ಬರು ೩೪.೮೨ ಗ್ರಾಂ ಚಿನ್ನದ ಕಡ ಕಳವು ಮಾಡಿz್ದÁರೆ. ಬುರ್ಖಾಧಾರಿ ಮಹಿಳೆ ಚಿನ್ನ ಖರೀದಿ ನೆಪದಲ್ಲಿ ತನಿಷ್ಕಾ ಜ್ಯುವಲರಿ ಮಳಿಗೆಗೆ ಬಂದರು. ಮಳಿಗೆಯಲ್ಲಿದ್ದ ಅಂಜಲಿ ರಾಠೋಡ್ ಅವರಿಗೆ ಒಡವೆ ತೋರಿಸುವಂತೆ ಹೇಳಿದರು. ಆಭರಣ ತೋರಿಸಿದರೂ ಖರೀದಿಸದೆ ಹೊರ ಹೋದರು. ಮಧ್ಯರಾತ್ರಿ ಆಭರಣಗಳ ಪರಿಶೀಲನೆ ವೇಳೆ ೨.೩೩ ಲP್ಷÀ ಮೌಲ್ಯದ ೩೪.೮೨ ಗ್ರಾಂ ಚಿನ್ನದ ಕಡ ಪತ್ತೆಯಾಗಲಿಲ್ಲ. ಮಳಿಗೆಯಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸಲಾಯಿತು. ಇಬ್ಬರು ಮಹಿಳೆಯರು ಮಾರಾಟ ಪ್ರತಿನಿಧಿ ಅಂಜಲಿ ಗಮನ ಬೇರೆಡೆ ಸೆಳೆದು, ಚಿನ್ನದ ಕಡ ಬುರ್ಖಾ ಒಳಗೆ ಇರಿಸಿಕೊಂಡು ಕಳ್ಳತನ ಮಾಡಿಕೊಂಡು ಹೋಗಿz್ದÁರೆ ಎಂದು ಮಳಿಗೆ ವ್ಯವಸ್ಥಾಪಕ ಸೈಯದ್ ಇಮ್ರಾಮ್ ದೂರು ನೀಡಿz್ದÁರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net