ಬುಧವಾರವೂ ಹಾಸನ ಜಿಲ್ಲಾದ್ಯಂತ ರ್ಭಜರಿ ಮಳೆ

ಬುಧವಾರವೂ ಹಾಸನ ಜಿಲ್ಲಾದ್ಯಂತ ರ್ಭಜರಿ ಮಳೆ
Published on

ಹಾಸನ: ಮಂಗಾರು ಮಳೆಯ ಆರ್ಭಟ ಬುಧವಾರವೂ ಸಹ ನಗರ ಸೇರಿ ಜಿಲ್ಲಾದ್ಯಂತ ಹಲವೆಡೆ ರ್ಭಜರಿ ಮಳೆಯಾಗಿದೆ.

ನಗರದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಂರಭವಾದ ಮಳೆ ಸತತವಾಗಿ ಎರಡ್ಮೂರು ಗಂಟೆಗಳ ಕಾಲ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು, ವಿದ್ಯಾರ್ಥಿಗಳ ಪರದಾಡುವಂತಾಗಿತ್ತು. ನಿರಂತವಾಗಿ ಸುರಿದಿದ್ದರಿಂದ ಜನರು ಛತ್ರಿ ಹಿಡಿದು ಓಡಾಡಬೇಕಾಯಿತು. ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ಮಯವಾಗಿದ್ದರಿಂದ ವಾಹನ ಸವಾರರು, ಪಾದರಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಹೊಳೆನರಸೀಪುರ ಪಟ್ಟಣದಲ್ಲಿ ಧಾರಾಕಾರ ಮಳೆ ಸುರಿದ ಮಳೆಗೆ ರೈಲ್ವೆ ನಿಲ್ದಾಣ ಎದುರು ಇರುವ ಮನೆಗಳು, ಹೋಟೆಲ್, ಟ್ಯ್ರಾಕ್ಟರ್ ಶೋರೂಂ ಹಾಗು ಇತರೆ ಅಂಗಡಿಗಳು ಜಲಾವೃತವಾಗಿದವು. ಮನೆ ಹಾಗು ಅಂಗಡಿಯೊಳಗಿದ್ದ ವಸ್ತುಗಳು ನೀರಿನಲ್ಲಿ ಮುಳುಗಿದ್ದು ಮಳೆಯ ನೀರನ್ನು ಹೊರಹಾಕಲು ಇಲ್ಲಿನ ನಿವಾಸಿಗಳು ಪರದಾಡಿದರು.

ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿದವು. ಇಷ್ಟೆಲ್ಲಾ ಅನಾಹುತ ನಡೆದರು ಪುರಸಭೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗು ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಮಂಗಳವಾರ ಹಾಸನ ನಗರದಲ್ಲ್ಲಿ ಸುರಿದ ಮಳೆಗೆ ಅಪಾರ ನಷ್ಟ ಉಂಟಾಗಿತ್ತು, ಬುಧವಾರ ಹೊಳೆನರಸೀಪುರದಲ್ಲಿ ಸುರಿದ ಮಳೆಗೆ ಹೆಚ್ಚಿನ ಪ್ರಮಾಣದ ಹಾನಿಯುಂಟಾಗಿದೆ. ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಮುಂದುವರೆದಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಈಗಾಗಲೇ ಬಿತ್ತನೆ ಮಾಡಿದ್ದ ಬೆಳೆಗೆ ಗೊಬ್ಬರ ಹಾಕುವ ಕೆಲಸ ನಡೆಯುತ್ತಿದೆ. ಇನ್ನು ಹಲವೆಡೆ ಬಿತ್ತನೆಗೆ ಉಳುಮೆ ಕಾರ್ಯ ಭರದಿಂದ ಸಾಗಿದೆ.ಇನ್ನೂ ಉಳಿದಂತೆ ಅರಕಲಗೂಡು,ಬೇಲೂರು ಸಕಲೇಶಪುರ, ಆಲೂರು ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net