ಬುದ್ಧಿವಾದ ಹೇಳಿದ್ದಕ್ಕೆ ಮನೆ ತೊರೆದ ಗೃಹಿಣಿ

Crime Logo
Published on

ಕಲಬುರಗಿ: ಗಂಡನ ಜತೆ ಸರಿಯಾಗಿ ಇರು ಎಂದು ಬುದ್ದಿವಾದ ಹೇಳಿದ್ದಕ್ಕೆ ಗೃಹಿಣಿಯೊಬ್ಬರು ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋದ ಘಟನೆ ನಡೆದಿದೆ. ಕಾಂತಾ ಕಾಲನಿ ನಿವಾಸಿ ಗಿರೀಶ ವಗ್ಗೆ ದೂರು ನೀಡಿz್ದÁರೆ. ಪತ್ನಿ ಕನ್ಯಾಕುಮಾರಿ ಹಾಗೂ ಖುಷಿ(೧೦), ಆರ್ವಿ(೭) ವರ್ಷದ ಮಗಳೊಂದಿಗೆ ಕಾಣೆಯಾಗಿz್ದÁಳೆ. ಗಿರೀಶ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆ ಪತ್ನಿ ಮಕ್ಕಳೊಂದಿಗೆ ಮಹಾರಾಷ್ಟçದ ಕೊಂಕಣ ಬೀಚ್‌ಗೆ ಹೋಗಿದ್ದಾರೆ. ಈ ವೇಳೆ ಕನ್ಯಾಕುಮಾರಿಯೂ ಪುಣೆಯ ಭೀಮು ಎಂಬಾತನ ಜತೆ ಮಾತನಾಡುವುದು ತಿಳಿದಿದೆ. ಈ ವೇಳೆ ಬುದ್ದಿವಾದ ಹೇಳಿದ ನಂತರ ಮಾತನಾಡುವುದು ಬಿಟ್ಟಿದ್ದಳು. ೧೫ ದಿನದ ನಂತರ ದೀಪಾವಳಿ ಹಬ್ಬಕ್ಕಾಗಿ ಕಲಬುರಗಿಗೆ ಬಂದಿದ್ದು, ನ.೧೨ರಂದು ತಂದೆ, ತಾಯಿ ಗಂಡನ ಜತೆ ಸರಿಯಾಗಿ ಇರುವ ಎಂದು ಬುದ್ಧಿವಾದ ಹೇಳಿದ್ದರಿಂದ ಜಗಳವಾಡಿ ಮಕ್ಕಳೊಂದಿಗೆ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net