ಬುದ್ಧಿ ಸಾಮರ್ಥ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ

4mnd1
Published on

ಮುಂಡಗೋಡ: ಇಂದಿನ ಯುಗದಲ್ಲಿ ಶಕ್ತಿ-ಸಾಮರ್ಥ್ಯಕ್ಕಿಂತ ಬುದ್ಧಿ ಸಾಮರ್ಥ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಂಗಳವಾರ ಸಾಂಕೇತಿಕವಾಗಿ ಉಚಿತ ಲ್ಯಾಪ್​ಟಾಪ್ ವಿತರಿಸಿ ಅವರು ಮಾತನಾಡಿದರು. ಒಟ್ಟು 246 ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ನೀಡಲಾಗುತ್ತದೆ. ನಿಮ್ಮ ಶಕ್ತಿ-ಸಾಮರ್ಥ್ಯದಲ್ಲಿ ನೀವು ಬದುಕಬೇಕು. ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಶೇ.65ರಷ್ಟು ದಾಪುಗಾಲು ಹಾಕುತ್ತಿದ್ದಾರೆ. ಎಲ್ಲವೂ ಕಂಪ್ಯೂಟರ್​ನಿಂದ ನಡೆಯುತ್ತಿರುವ ಕಾಲವಾಗಿರುವುದರಿಂದ ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ. ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಪ್ರಯೋಜನ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಾಕರಸಾ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ, ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ, ಪ್ರಾಚಾರ್ಯು ಇಂದಿರಾ ಬಾಗಲಕೋಟೆ, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ದೇವು ಪಾಟೀಲ, ಜ್ಞಾನದೇವ ಗುಡಿಯಾಳ ಇತರರಿದ್ದರು.

ನೀರಿನ ಘಟಕ ಉದ್ಘಾಟನೆ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕಾಲೇಜ್​ನಲ್ಲಿ ನಿರ್ವಿುಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಹೆಬ್ಬಾರ ಮಂಗಳವಾರ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net