ಬುದ್ಧವಿಹಾರದಲ್ಲಿ ತ್ರಿಪಿಟಕ ಪಠಣ

Dhamma
Published on

ಕಲಬುರಗಿ: ನಗರ ಹೊರ ವಲಯದ ಸಿದ್ಧಾರ್ಥ ವಿಹಾರ ಟ್ರಸ್ಟ್ ಹಾಗೂ ಬೆಂಗಳೂರಿನ ಮಹಾಬೋ ಸಂಸ್ಥೆಯಿAದ ಮಂಗಳವಾರ ತ್ರಿಪಿಟಕ ಸದ್ಧಮ್ಮ ಸಜ್ಜಾಯನದ ನಿಮಿತ್ತ ತ್ರಿಪಿಟಕ ಪಠಣ ನಡೆಯಿತು. ಬುದ್ಧವಿಹಾರದೆಲ್ಲೆಡೆ ಬೌದ್ಧ ಬಿಕ್ಕುಗಳು ಹಾಗೂ ಶ್ವೇತ ವಸಧಾರಿಗಳು, ೧೦೮ ದೇಶ, ಭಾರತದ ವಿವಿಧೆಡೆಯಿಂದ ನೂರಾರು ಬಿಕ್ಕುಗಳು ಐದು ಗಂಟೆ ಬೌದ್ಧ ಸಾಹಿತ್ಯದ ತ್ರಿಪಿಟಕ ಮತ್ತು ಸಾದು ಸಾದು ಸ್ಮರಣೆ ಮಾಡಿದರು.

ಮಹಾಬೋ ಸಂಸ್ಥೆಯ ಆನಂದ ಭಂತೇಜಿ ಮಾತನಾಡಿ, ತ್ರಿಪಿಟಕ ಪಠಣ ನಂತರ ಗೌತಮ ಬುದ್ಧರ ಉಪನ್ಯಾಸ, ಉಪದೇಶ, ಚರ್ಚೆ, ಸಂಭಾಷಣೆಗಳ ಸಾರ ಅವರು ಕನ್ನಡದಲ್ಲಿ ಅನುವಾದ ಮಾಡಿ, ಮಾಹಿತಿ ನೀಡಿದರು. ವಿಯೆಟ್ನಾಂ ಭಂತೇಜಿ ತಿನ ದತ್ ಪಠಣದ ವೇಳೆ, ಇಂದ್ರಿಯಗಳಾದ ಕಣ್ಣು, ಕಿವಿ, ನಾಲಿಗೆ, ಮೂಗು, ಚರ್ಮ ಹಾಗೂ ಮನಸ್ಸಿಗೆ ಹೊರಗಿನ ವಿಷಯ ಸಂಪರ್ಕಕ್ಕೆ ಬಂದಾಗ ಹೊಸ ಯೋಚನೆ ಹುಟ್ಟುತ್ತವೆ ಎಂದರು.

ಕಾAಬೋಡಿಯಾದ ಭಂತೇಜಿ ಮಾತನಾಡಿ, ಇಂದ್ರಿಯಗಳಿAದ ಮನಸ್ಸಿನಲ್ಲಿ ಯೋಚನೆ ಹುಟ್ಟಿ ಬೇಕು-ಬೇಡಗಳೂ ಜನ್ಮ ತಳೆಯುತ್ತವೆ ಎಂದರು.

ಭAತೇಜಿ ಅತಿತ್ಕಾ ಮಹಾಥೇರೊ, ಅಮೆರಿಕದ ಭಂತೇಜಿ ವಾಂಗಮೊ ಡಿಕ್ಸೆ, ಥಾಯ್ಲೆಂಡ್ನ ಭಂತೇಜಿ ದ್ರೊ ಸಮತ್ ಪಾರೊ, ಭಂತೇಜಿ ಎಂಪಾಟ್, ಕಾಂಬೋಡಿಯಾದ ಭಂತೇಜಿ ಧಮ್ಮಸಿರಿ, ಶ್ರೀಲಂಕಾದ ಭಂತೇಜಿ ಲಮ್ಕನಾಂಕ್, ಬೌದ್ಧ ಬಿಕ್ಕು ಸಂಘಾನAದ ಭಂತೇಜಿ, ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿ ರಾಧಾಬಾಯಿ ಖರ್ಗೆ, ಟ್ರಸ್ಟಿ ಶಾಂತಪ್ಪ ಸೂರನ್, ಮಹಾಂತಪ್ಪ ಸಂಗಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net