ಬುದ್ಧನಿಂದ ಧಮ್ಮಚಕ್ರ ಪ್ರವರ್ತನ ಆರಂಭ

klb5
ವಾಡಿಯಲ್ಲಿ ಹಮ್ಮಿಕೊಂಡಿದ್ದ 68ನೇ ಧಮ್ಮಚಕ್ರ ಪ್ರವರ್ತನ ಹಾಗೂ ಅಶೋಕ ವಿಜಯದಶಮಿ ಕಾರ್ಯಕ್ರಮದಲ್ಲಿ ಭಿಕ್ಖುಣಿ ಅರ್ಚಸ್ಮತಿ ಮಾತನಾಡಿದರು. ಭಿಕ್ಖುಣಿ ಖೇಮಾ, ಟೋಪಣ್ಣ ಕೋಮಟೆ, ಸೂರ್ಯಕಾಂತ ರz್ದೆÃವಾಡಿ ಇತರರಿದ್ದರು.
Published on

ವಾಡಿ: ಗೌತಮ ಬುದ್ಧ ಶಿಷ್ಯರಾದ ವಪ್ಪ, ಭಾದಿಯಾ, ಮಹಾನಾಮ, ಕೌಂಡಿನ್ಯ ಮತ್ತು ಅಸ್ಸಾಗಿ ಎಂಬುವವರಿಗೆ ಸಾರನಾಥದಲ್ಲಿ ಮೊದಲ ಧಮ್ಮೋಪದೇಶ ನೀಡುವ ಮೂಲಕ ಪ್ರಥಮ ಧಮ್ಮಚಕ್ರ ಪ್ರವರ್ತನ ಮಾಡಿದರು ಎಂದು ಭಿಕ್ಖುಣಿ ಅರ್ಚಸ್ಮತಿ ಹೇಳಿದರು.

ಧಮ್ಮದೀಕ್ಷೆ ಭೂಮಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 68ನೇ ಧಮ್ಮಚಕ್ರ ಪ್ರವÀರ್ತನ ಹಾಗೂ ಅಶೋಕ ವಿಜಯದಶಮಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಸಾಮ್ರಾಟ್ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದ ನಂತರ ಮನಃ ಪರಿವರ್ತನೆಯಾಗಿ ಯುದ್ಧ ತ್ಯಜಿಸಿ ಬೌದ್ಧ ಧಮ್ಮ ಸ್ವೀಕರಿಸುವ ಮೂಲಕ ಎರಡನೇ ಬಾರಿ ಧಮ್ಮಚಕ್ರ ಪ್ರವರ್ತನ ಮಾಡಿದರು. 1956 ಅ.14 ರಂದು ಮಹಾರಾಷ್ಟçದ ನಾಗಪುರದಲ್ಲಿ 5 ಲಕ್ಷಕ್ಕೂ ಅಧಿಕ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸುವ ಮೂಲಕ ಮೂರನೇ ಸಲ ಧಮ್ಮಚಕ್ರ ಪ್ರವರ್ತನೆ ಮಾಡಲಾಯಿತು ಎಂದು ವಿವರಿಸಿದರು.
ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಡಾ.ಅಂಬೇಡ್ಕರ್ ಅವರ 22 ಪ್ರತಿಜ್ಞೆಗಳನ್ನು ಬೋಧಿಸಿದರು. ಭಿಕ್ಖುಣಿ ಖೇಮಾ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಸೂರ್ಯಕಾಂತ ರz್ದÉÃವಾಡಿ, ಗೊಲ್ಲಾಳಪ್ಪ ಬಡಿಗೇರ, ಶರಣಬಸ್ಸು ಸಿರೂರಕರ, ಚಾಂದ್ ಜಾಕ್ಸನ್, ಭೀಮಶಾ ಮೈನಾಳಕರ, ಖೇಮಲಿಂಗ ಬೆಳಮಗಿ, ಭೀಮಾ ನಾಟೇಕರ, ಹಣಮಂತ ಶಹಾಬಾದ, ದೊಡ್ಡೇಶ ಬಡಿಗೇರ, ಸಂತೋಷ ಜೋಗೂರ, ಗೊಲ್ಲಾಳಪ್ಪ ಭಂಟನೂರ, ಮಹಾದೇವ ಮಾಲಗತ್ತಿ, ಸಂಜಯ ಗೋಪಾಳೆ, ಬೈಲಪ್ಪ ಮೈನಾಳಕರ, ವಿಠ್ಠಲ ಮಾಶಾಳ, ಪ್ರಭು ಸಿರೂರಕರ, ದೀಲಿಪ್ ಮೈನಾಳಕರ, ಪ್ರಶಾಂತ ಕಿಣ್ಣಿಕರ, ಮಹೇಶ ರಾಜಳ್ಳಿ, ಅಂಬಿಕಾ ರz್ದÉÃವಾಡಿ, ಗೌತಮಿ ಕೇತನಕರ, ವಿಶಾಲ ಬಡಿಗೇರ, ಬಸವರಾಜ ಜೋಗೂರ, ಶ್ರೀಕಾಂತ ಕೇತನಕರ, ಪ್ರಕಾಶ ತೆಲ್ಲೂರ, ಮೌನೇಶ ಮಾಲಗತ್ತಿ ಇತರರಿದ್ದರು. ಮರಲಿಂಗ ಮಾಲಗತ್ತಿ ಸ್ವಾಗತಿಸಿದ್ದರು. ರವಿ ಕೋಳಕೂರ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net