ಬುದ್ಧನ ಸನ್ಮಾರ್ಗವನ್ನು ಯುವ ಪೀಳಿಗೆ ಅನುಸರಿಸಲಿ

24 mlv 1
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಇರುವ ಅಂಬೇಡ್ಕರ್ ಪುತ್ಥಳಿಗೆ ಭಾರತೀಯ ಬೌದ್ಧ ಮಹಾಸಭ ರಾಜ್ಯ ಯುವ ಘಟಕದ ಅಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಮಾಲಾರ್ಪಣೆ ಮಾಡಿದರು. ಮಾರ್ಕಾಲು ನಟರಾಜ್, ಮೋಹನ್‌ಕುಮಾರ್, ಡಿ.ಕೃಷ್ಣ, ಅರುಣ್, ಪರಮಶಿವ, ಸತೀಶ್, ಅನಂತ್‌ಕುಮಾರ್, ರಘುರಾಜ್, ಸಿದ್ದರಾಜು, ಶ್ರೀಧರ್, ಸಂದೇಶ್, ವಿಜಯ್, ಚಂದ್ರಶೇಖರ್, ಯತೀಶ್, ದೊರೆಸ್ವಾಮಿ, ಹನುಮಂತು ಇದ್ದರು.
Published on

ಮಳವಳ್ಳಿ: ಮನುಕುಲಕ್ಕೆ ಅಹಿಂಸೆ ಮಾರ್ಗದ ಸಂದೇಶ ಸಾರಿದ ಬುದ್ಧನ ಸನ್ಮಾರ್ಗವನ್ನು ಯುವ ಪೀಳಿಗೆ ಅನುಸರಿಸಿದರೆ ನೆಮ್ಮದಿಯ ಜೀವನ ಕಾಣಬಹುದಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ತಿಳಿಸಿದರು.

ತಾಲೂಕಿನ ಬಾಚನಹಳ್ಳಿ ಸಮೀಪವಿರುವ ಮಿಲಿಂದ ಬುದ್ಧ ವಿಹಾರದ ವತಿಯಿಂದ ಬುದ್ಧಪೂರ್ಣಿಮೆ ಪ್ರಯುಕ್ತ ಗುರುವಾರ ಪಟ್ಟಣದಲ್ಲಿ ಆಯೋಜಿಸಿದ ಬುದ್ಧ ಪ್ರತಿಮೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾತಿ, ಧರ್ಮದ ಜಂಜಾಟಗಳಿಂದ ಜನಸಾಮಾನ್ಯರು ಹೊರಬರಬೇಕೆಂದು ಭಗವಾನ್ ಬುದ್ಧ ಪ್ರತಿಪಾದಿಸಿದ್ದರು. ಅವರ ತತ್ವ ಆದರ್ಶಗಳು ಯಾವುದೇ ಜಾತಿ, ಪಂಥಗಳನ್ನು ಲೆಕ್ಕಿಸದೆ ಎಲ್ಲ ಮಾನವರಿಗೆ ಅನ್ವಯಿಸುತ್ತದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಬುದ್ಧನ ಬೋಧನೆಗಳಲ್ಲಿ ಕಂಡುಬರುವ ಸಮಾನತೆ, ಸಹಬಾಳ್ವೆ ಮತ್ತು ಸಹೋದರತ್ವ ಗುಣಗಳ ಅಳವಡಿಕೆಗೆ ಮುಂದಾಗಬೇಕು ಎಂದು ತಿಳಿಸಿದರು.

ಬೌದ್ಧ ಧಮ್ಮವನ್ನು ಪ್ರಚಾರ ಮಾಡುವ ಮೂಲಕ ಸಮಾಜವನ್ನು ಸಂಘಟಿಸುವುದು ಎಲ್ಲರ ಕರ್ತವ್ಯವಾಗಿದೆ. ಇಂಥಹ ಕಾರ್ಯಕ್ಕೆ ನಾಡಿನ ಯುವಕರು ಶ್ರಮವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬುದ್ಧನ ಪ್ರತಿಮೆ ಮೆರವಣಿಗೆ ನಡೆಯಿತು. ನಂತರ ಪ್ರವಾಸಿ ಮಂದಿರದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸಲಾಯಿತು.

ಭಂತೇಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬುದ್ಧ ವಂದನೆ ಬೋಧಿಸಿದರು. ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಾರ್ಕಾಲು ನಟರಾಜ್, ತಾಲೂಕು ಅಧ್ಯಕ್ಷ ಮೋಹನ್‌ಕುಮಾರ್, ಮುಖಂಡರಾದ ಡಿ.ಕೃಷ್ಣ, ಅರುಣ್, ಪರಮಶಿವ, ಸತೀಶ್, ಅನಂತ್‌ಕುಮಾರ್, ರಘುರಾಜ್, ಸಿದ್ದರಾಜು, ಶ್ರೀಧರ್, ಸಂದೇಶ್, ವಿಜಯ್, ಚಂದ್ರಶೇಖರ್, ಯತೀಶ್, ದೊರೆಸ್ವಾಮಿ, ಹನುಮಂತು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net