

ಕಲಬುರಗಿ: ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣ ಬೌದ್ಧರಿಗೆ ನೀಡಲು ಆಗ್ರಹಿಸಿ, ಬಿ.ಟಿ.ಕಾಯ್ದೆ -೧೯೪೯ ರದ್ದುಗೊಳಿಸಬೇಕು, ಬೌದ್ಧರ ಧಾರ್ಮಿಕ ಹಕ್ಕು ರಕ್ಷಿಸಬೇಕು ಎಂದು ಆಗ್ರಹಿಸಿ ಸಂವಿಧಾನ ದಿನವಾದ ನ.೨೬ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬುದ್ಧಗಯಾದ ಪೂಜ್ಯ ಬದಂತ ಪ್ರe್ಞÁಶೀಲ ಮಹಾಥೇರೋ ಹೇಳಿದರು.
ಬುದ್ಧಗಯಾ ಜಗತ್ತಿನ ಬೌದ್ಧರಿಗೆ ಪವಿತ್ರ ಸ್ಥಳವಾಗಿದ್ದು, ಆದರೆ, ಇದರ ಆಡಳಿತ ಇದುವರೆಗೂ ಸಂಪೂರ್ಣವಾಗಿ ಬೌದ್ಧರಿಗೆ ನೀಡಿಲ್ಲ. ಬಿಹಾರದ ಬೌದ್ಧಗಯಾದಲ್ಲಿ ಇದುವರೆಗೂ ಬೌದ್ಧರಿಗೆ ಆಡಳಿತ ನೀಡಿಲ್ಲ. ಹೊರತಾಗಿ ನಾಲ್ವರು ಬೌದ್ಧರು ಮತ್ತು ನಾಲ್ವರು ಹಿಂದೂಗಳನ್ನು ಸೇರಿಸಿ ಆಡಳಿತ ಮಂಡಳಿ ಇರುವುದು ಸರಿಯಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂವಿಧಾನದ ಕಲಂ ೨೫,೨೬ ಮತ್ತು ೨೯ರ ಪ್ರಕಾರ ಎಲ್ಲ ಜಾತಿ, ಜನಾಂಗದವರು ಸ್ವತಂತ್ರವಾಗಿ ದೇವಸ್ಥಾನ, ಮಂದಿರ ಮಾಡಿಕೊಳ್ಳಬೇಕು ಎಂಬ ನಿಯಮ ಇದೆ. ಎಲ್ಲ ಜಾತಿಗಳ ದೇವಸ್ಥಾನ, ಟ್ರಸ್ಟ್ಗಳಿಗೆ ಆಯಾ ಜಾತಿಗಳ ಪ್ರಮುಖರು ಆಡಳಿತ ಮಂಡಳಿಗಳಿವೆ. ಆದರೆ ಬುದ್ಧಗಯಾದಲ್ಲಿ ಇದರ ವಿರುದ್ಧ ನಡೆ ಇದೆ ಎಂದರು.
ಸAವಿಧಾನ ವಿರೋಧಿ ಬಿಟಿ ಕಾಯಿದೆ -೧೯೪೯ರ ಅಡಿ ಆಡಳಿತ ಮಂಡಳಿಯೊಳಗೆ ಸೇರಿಸಿ ಹಿಂದೂ ಪುರೋಹಿತರು ಬೌದ್ಧ ಇತಿಹಾಸ ಮತ್ತು ಸಂಸ್ಕೃತಿ ನಾಶಕ್ಕೆ ಕೈಹಾಕಿz್ದÁರೆ. ಬುದ್ಧನ ವಿಗ್ರಹದ ಮುಂದೆ ಶಿವಲಿಂಗ ಇದೆ ಎಂದು ಸುಳ್ಳು ಸೃಷ್ಟಿಸಿz್ದÁರೆ. ಬುದ್ಧ ವಿಹಾರದ ಆವರಣದಲ್ಲಿ ಗಣಪತಿ ವಿಗ್ರಹವಿಟ್ಟಿz್ದÁರೆ. ಹಲವು ಬೌದ್ಧ ಮೂರ್ತಿಗಳನ್ನು ಹಿಂದೂಕರಣ ಮಾಡಿz್ದÁರೆ. ಅಲ್ಲಿ ಪಿಂಡದಾನ ಮಾಡಿ ಬೌದ್ಧ ಸಂಸ್ಕೃತಿ ನಾಶ ಮಾಡುತ್ತಿz್ದÁರೆ ಎಂದು ಆರೋಪಿಸಿದರು.
ಈ ಕುರಿತು ಬಿಹಾರ ಸರ್ಕಾರ ಮತ್ತು ಪ್ರಧಾನ ಮಂತ್ರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನ.೨೬ರಂದು ದೇಶದ ಎಲ್ಲ ಜಿ¯್ಲÁಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಿಎಂ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಫೆ.೧೨ರಂದು ಬೋಧಗಯಾದಲ್ಲೂ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಭಂತೆ ಸಂಘಾನAದ, ಸುಮನ ಆರ್ಯಾಜಿ, ಅಸ್ಸಾಜಿ, ಬುದ್ಧಘೋಷ ದೇವಿಂದ್ರ ಹೆಗಡೆ, ಅರ್ಜುನ ಭದ್ರೆ, ವಿ.ಟಿ.ಕಾಂಬಳೆ, ಸೂರ್ಯಕಾಂತ ನಿಂಬಾಳಕರ, ವೆಂಕಟೇಶ ಬಿಜಾಪುರ, ಮಹೇಶ ಹುಬ್ಬಳ್ಳಿ ಇತರರಿದ್ದರು.