ಬುದ್ಧ ಸಾಹಿತ್ಯ ಸಮ್ಮೇಳನ ಆ.13ಕ್ಕೆ

PHOTO-3--05
Published on


ಚಿತ್ರದುರ್ಗ: ಕ್ರೀಡಾ ಭವನದಲ್ಲಿ ಆ. 13ರಂದು ನವಯಾನ ಸಾಹಿತ್ಯ ಸಂಘದಿಂದ ಬುದ್ಧ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ನಾಡಿನ ಪ್ರಮುಖ ಸಾಹಿತಿಗಳು, ಹೋರಾಟಗಾರರು, ಬುದ್ಧ ಧಮ್ಮ ಉಪಾಸಕರು-ಉಪಾಸಕಿಯರು, ಅನುಯಾಯಿಗಳು, ಬುದ್ಧನ ತತ್ವ ಒಪ್ಪಿಕೊಂಡ ರಾಜಕಾರಣಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಇದೇ ವೇಳೆ ಬುದ್ಧ ಮತ್ತು ಪ್ರಜಾಪ್ರಭುತ್ವ, ಬುದ್ಧ ವಾದ ಮತ್ತು ಆರ್ಥಿಕ ಚಿಂತನೆ, ಸಾಮಾಜಿಕ ಚಿಂತನೆ, ಮಹಿಳೆಯರು ಎಂಬ 4 ವಿಷಯಗಳ ಕುರಿತು ಗೋಷ್ಠಿ ನಡೆಸಲು ಚರ್ಚಿಸಲಾಯಿತು.

ಸಮಿತಿ ರಾಜ್ಯ ಉಪಾಧ್ಯಕ್ಷ ರಾಮು ಗೋಸಾಯಿ, ಜಿಲ್ಲಾಧ್ಯಕ್ಷ ಕೆ.ಕುಮಾರ್, ಗೌರವಾಧ್ಯಕ್ಷ ಎಚ್.ಆನಂದಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಣ್ಣ, ನೆಲ್ಸನ್ ಮಂಡೇಲ, ರಾಜ್ಯ ಮಾದಿಗ ಯುವಸೇನೆ ಉಪಾಧ್ಯಕ್ಷ ಬಿ.ರಾಜಪ್ಪ, ಮುಖಂಡರಾದ ಡಿ.ದುರುಗೇಶ್, ಟಿ.ರಾಮು, ಹಾವೇರಿಯ ನೀಲಕಂಠಪ್ಪ, ಉಪನ್ಯಾಸಕರಾದ ಸಂಜೀವಕುಮಾರ್ ಪೋತೆ, ಕುಮಾರ್, ಶಿಕ್ಷಕ ಸಿದ್ದೇಶ್, ಗೋಪಾಲಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net