ಬುದ್ಧ ವಿಹಾರದಲ್ಲಿ ಪ್ರತಿಷ್ಠಾಪನೆ ನಾಳೆ

Ramesh begar
Published on

ಕಲಬುರಗಿ: ನಗರದ ಹೊರವಲಯದ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಸಿದ್ಧಾರ್ಥ ಬುದ್ಧ ವಿಹಾರ ಟ್ರಸ್ಟ್ನಿಂದ ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮ ಶನಿವಾರ ಮಧ್ಯಾಹ್ನ ೧೨ಕ್ಕೆ ನಡೆಯಲಿದೆ ಎಂದು ಟ್ರಸ್ಟ್ನ ರಮೇಶ ಬೇಗಾರ ಹೇಳಿದರು.

ಇಂಡೋನೆಷ್ಯಾದಲ್ಲಿ ಶಿಲೆಯಿಂದ ಸಿದ್ಧಪಡಿಸಿದ ಪ್ರತಿಮೆಯನ್ನು ಬುದ್ಧ ವಿಹಾರದ ಆವರಣದಲ್ಲಿ ಪ್ರತಿಷ್ಠಾಪಿಸುತ್ತಿದ್ದು, ರಾಜ್ಯಸಭೆ ಪ್ರತಿ ಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಸಿದ್ಧಾರ್ಥ ಬುದ್ಧ ವಿಹಾರ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರಾಹುಲ್ ಖರ್ಗೆ ಸೇರಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಗನ ಮಲಿಕ್ ಡೇಷನ್ ಸಂಸ್ಥಾಪಕ ಗಗನ ಮಲಿಕ್ ಅವರು ಪ್ರತಿಮೆ ದಾನವಾಗಿ ನೀಡಿದ್ದಾರೆ. ಕಾರ್ಯಕ್ರಮದ ವೇಳೆ ಇಂಡೋನೆಷ್ಯಾದ ೩೦, ಮಹಾರಾಷ್ಟçದ ೩೦ ವಿಶೇಷ ಪ್ರತಿನಿಧಿಗಳ ತಂಡ ಬುದ್ಧ ವಿಹಾರಕ್ಕೆ ಭೇಟಿ ನೀಡಲಿದೆ. ೨೦೦ಕ್ಕೂ ಹೆಚ್ಚಿನ ಬೌದ್ಧ ಉಪಾಸಕ, ಉಪಾಸಕಿಯರು ಭಾಗವಹಿಸಲಿದ್ದಾರೆ ಎಂದರು.
ಸಮಾರAಭಕ್ಕೂ ಮುನ್ನ ಬುದ್ಧನ ಸಣ್ಣ ಮೂರ್ತಿಯೊಂದಿಗೆ ಬೌದ್ಧ ಉಪಾಸಕರು ಹಾಗೂ ವಿಶೇಷ ಪ್ರತಿನಿಧಿಗಳು, ಬೌದ್ಧ ಬಿಕ್ಕುಗಳು ಮೆರವಣಿಗೆ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಧಮ್ಮ ಚಕ್ರ ಪರಿವರ್ತನಾ ದಿನವಾದ ದಶಮಿಯಿಂದ ಒಂದು ಲಕ್ಷಕ್ಕೂ ಹೆಚ್ಚಿನ ಬೌದ್ಧ ಉಪಾಸಕರು ಬುದ್ಧ ವಿಹಾರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಸಿದ್ಧಾರ್ಥ ಬುದ್ಧ ವಿಹಾರ ಟ್ರಸ್ಟ್ನ ಭೀಮರಾವ ಟಿ.ಟಿ.,ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಈಶ್ವರ ಇಂಗಿನ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net