ಬುದ್ಧ ಧಮ್ಮದಲ್ಲಿ ಮಂಗಳಸೂತ್ರಕ್ಕೆ ಪ್ರಾಮುಖ್ಯತೆ

IMG-20250204-WA0036
Published on

ಚಾಮರಾಜನಗರ: ಬುದ್ಧ ಧಮ್ಮದಲ್ಲಿ ಮಂಗಳಸೂತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಟಿ.ನರಸೀಪುರದ ಬೋಧಿರತ್ನ ಭಂತೇಜಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದ ಸಮೀಪದಲ್ಲಿರುವ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಧಮ್ಮದೀಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬೌದ್ಧ ಧಮ್ಮದಲ್ಲಿ ಮಂಗಳಸೂತ್ರ ಅರ್ಥವನ್ನು ತಿಳಿದುಕೊಂಡು ಪ್ರಾರ್ಥನೆ ಮಾಡಬೇಕು. ಧಮ್ಮದ ಧ್ಯಾನ ಪ್ರಕ್ರಿಯೆಯಲ್ಲಿ ಬುದ್ಧಾನುಸುತಿ, ಧಮ್ಮಾನುಸುತಿ ಮತ್ತು ಸಂಘಾನುಸುತಿ ಎಂಬ ಮೂರು ಪ್ರಕಾರಗಳಿವೆ. ಮನಸ್ಸು ತತ್‌ಕ್ಷಣದಲ್ಲಿ ಬದಲಾಗುತ್ತದೆ. ಚಂಚಲತೆಯಿಂದ ಕೂಡಿರುವ ಮನಸ್ಸಿನಲ್ಲಿ ಏಕಾಗ್ರತೆ ತರುವುದು ಬಲುಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಬುದ್ಧ, ಧಮ್ಮ, ಸಂಘವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಧ್ಯಾನವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪರಿವರ್ತನ ಅಧ್ಯಯನ ಕೇಂದ್ರದ ಅಧ್ಯಕ್ಷ ಉಪಾಸಕ ಡಾ.ಪಿ.ದೇವರಾಜು, ಮಹೇಶ್ ಕೆಂಪನಪುರ, ಸಿದ್ದರಾಜಪ್ಪ, ನಟರಾಜು, ಬ.ಮ.ಕೃಷ್ಣಮೂರ್ತಿ, ಪ್ರಕಾಶ್, ಮಲ್ಲಕ್, ಉಮೇಶ್ ಕುದರ್, ಕುಮಾರಸ್ವಾಮಿ, ಎನ್.ನಾಗಯ್ಯ, ಸುಶೀಲಾ, ಶಿವಣ್ಣ, ನಂಜುಂಡಯ್ಯ, ನವೀನ್, ಜಿ.ಮಹೇಶ್, ಪ್ರೇಮ ದೇವರಾಜ್, ರವಿಕುಮಾರ್, ಚಂದ್ರಮ್ಮ, ಬಾಲರಾಜು, ನಾಗಮ್ಮ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net