ಬುದ್ಧ ಜ್ಞಾನದ ಸಂಕೇತ

Buddha
Published on

ಚಿತ್ರದುರ್ಗ: ಪಂಚಶೀಲ ತತ್ವ, ಅಷ್ಠಾಂಗ ಮಾರ್ಗ, ಅಭಿವ್ಯಕ್ತಿ ಮತ್ತು ವೈಯಕ್ತಿಕ ಸ್ವಾತಂತ್ರೃದ ಮಹತ್ವ ವಿಶ್ವಕ್ಕೆ ಸಾರಿದ ಬುದ್ಧ ಜ್ಞಾನದ ಸಂಕೇತ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವಕುಮಾರ್ ಪೋತೆ ತಿಳಿಸಿದರು.

ಬುದ್ಧನ ಪ್ರತಿಮೆ ಬಳಿ ಭಾನುವಾರ ಜೈ ಭೀಮ್ ಕಾರ್ಯಕಾರಿ ಸಮಿತಿ, ನವಯಾನ ಬುದ್ಧ ಧಮ್ಮ ಪಥದಿಂದ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ದಿನದ ಸ್ಮರಣೆಯಲ್ಲಿ ಮಾತನಾಡಿದರು.

ಬುದ್ಧ ತನ್ನ ವಿರೋಧಿಗಳಿಗೂ ಹಿಂಸೆ ಬಯಸಲಿಲ್ಲ. ಸ್ವಯಂ ಅವಲೋಕನ, ಚಿಂತನೆ, ಪುನರ್ ಪರಿಶೀಲನೆಗೆ ಒಳಪಡುತ್ತಿದ್ದ ಮಹಾನ್ ಜ್ಞಾನಿ. ಹೀಗಾಗಿ ಬುದ್ಧ ಧಮ್ಮ ಕೂಡ ಪ್ರಜ್ಞೆ, ಸಮಾನತೆ, ಸಹೋದರತ್ವದ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ ಎಂದರು.

ಲೇಖಕ ಎಚ್.ಆನಂದ್‌ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕಷ್ಟೇ ಸಂವಿಧಾನ ನೀಡಿಲ್ಲ. ಎಲ್ಲಾ ಜಾತಿ, ಧರ್ಮದವರಿಗೂ ಸಮಾತನೆ ಕಲ್ಪಿಸಿದ ಮಹನೀಯ. ಆದರೆ, ದೇಶದೊಳಗೆ ಈಗಲೂ ಅಸಮಾನತೆ ಜೀವಂತ ಇರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.

ಶಿಕ್ಷಕ ಕಸವನಹಳ್ಳಿ ಶಿವಣ್ಣ, ಪ್ರಾಚಾರ್ಯ ಬಿ.ಟಿ.ತಿಪ್ಪೇಸ್ವಾಮಿ, ಸಹ ಪ್ರಾಧ್ಯಾಪಕ ಎಸ್.ನಾಗರಾಜ್, ನಗರಸಭೆ ಮಾಜಿ ಸದಸ್ಯೆ ಶಾಂತಕುಮಾರಿ, ವಾಣಿಶ್ರೀ, ತಮ್ಮಣ್ಣ, ಮುರುಗನ್, ಯಲ್ಲಪ್ಪ, ಮಲ್ಲೇಶಣ್ಣ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net