ಬುದ್ಧ, ಅಂಬೇಡ್ಕರ್ ಆದರ್ಶ ಅಳವಡಿಸಿಕೊಳ್ಳಿ

klb7
ಆಳಂದ ತಾಲೂಕಿನ ಧಂಗಾಪೂರದಲ್ಲಿ ಗುರು ಪೂರ್ಣಿಮೆ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಘದ ಆಶ್ರಯದಲ್ಲಿ ಧಮ್ಮ ದೀಪೆÇೀತ್ಸವ ನಡೆಯಿತು. ಅಮರ ಜ್ಯೋತಿ ಭಂತೆ, ತುಕಾರಾಮ ಮೇಲಕೇರಿ, ಶರಣಬಸಪ್ಪ ಕಾಂಬಳೆ, ಕೃಷ್ಣ ಮೇಲಕೇರಿ, ಕೃಷ್ಣ ಕಾಂಬಳೆ ಇತರರಿದ್ದರು.
Published on

ಆಳಂದ: ಇಂದಿನ ಯುವ ಸಮೂಹ ಬುದ್ಧ, ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಳಮಗಿಯ ಭಂತೆ ಅಮರ ಜ್ಯೋತಿ ಕರೆ ನೀಡಿದರು.

ಧಂಗಾಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಸೇವಾ ಸಂಘದಿಂದ ಗುರುಪೂರ್ಣಿಮೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಧಮ್ಮ ದಿಪೆÇೀತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮೂಢನಂಬಿಕೆಗಳಿಂದ ಹೊರ ಬಂದು ಸನ್ಮಾರ್ಗದ ಕಡೆ ನಾವು ನಡೆಯಬೇಕಿದೆ. ಗುಣಾತ್ಮಕ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ಎಂದು ಸಲಹೆ ನೀಡಿದರು.

ಡಾ. ಬಿ.ಆರ್.ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ತೇಲ್ಕರ್ ಮಾತನಾಡಿದರು. ಲಕ್ಷ್ಮೀಬಾಯಿ ಭೂಸನೂರ ದಂಪತಿ ಮನೆಯಿಂದ ಗೌತಮ ಬುದ್ಧ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರದೊಂದಿಗೆ ದೀಪ ಹೊತ್ತು ಅಂಬೇಡ್ಕರ್ ಪ್ರತಿಮೆವರೆಗೂ ಹೆಜ್ಜೆ ಹಾಕಿದರು.
ಪ್ರಮುಖರಾದ ಅಮೃತ ಮೇಲಕೇರಿ, ತುಕಾರಾಮ ಮೇಲಕೇರಿ, ಶರಣಬಸಪ್ಪ ಕಾಂಬಳೆ, ಕೃಷ್ಣ ಮೇಲಕೇರಿ, ಕೃಷ್ಣ ಕಾಂಬಳೆ, ವಿಠ್ಠಲ್ ಪಟ್ಟಣ, ಶಿವಕುಮಾರ ಮೇಲಕೇರಿ, ಶರಣಬಸವೇಶ್ವರ ಕೋರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net