

ಕಂಪ್ಲಿ: ಪಟ್ಟಣದ ಮಾರುತಿನಗರದ ಶ್ರೀ ಬ್ರಹ್ಮದೇವ (ಬುಡ್ಡೆಕಲ್ಲು) ಸ್ಥಾಪನೆ, ಶ್ರೀ ಆಂಜನೇಯ ಸ್ವಾಮಿ ಗಂಗೆಸ್ಥಳ ಮೆರವಣಿಗೆ ನಿಮಿತ್ತ ಬುಧವಾರ ನಾನಾ ಕಾರ್ಯಕ್ರಮಗಳು ಶ್ರದ್ಧೆಯಿಂದ ನಡೆದವು.
ಕಲ್ಮಠದಿಂದ ಡೊಳ್ಳು ಕುಣಿತ, ಮಂಗಳವಾದ್ಯದೊಂದಿಗೆ ಬುಡ್ಡೆಕಲ್ಲು ಪುರಪ್ರವೇಶ ಮೆರವಣಿಗೆ ನಡೆಯಿತು. ಬೇವಿನಹಾಳ್-ನಾಗನಕಲ್ ಡಾ.ಶರಣಯ್ಯಸ್ವಾಮಿ ಹಿರೇಮಠ ಪೌರೋಹಿತ್ಯದಲ್ಲಿ ಗಂಗಾಪೂಜೆ, ಗಣೇಶ ಪೂಜೆ, ಜಲಾಧಿವಾಸ, ಅನ್ನಸಂತರ್ಪಣೆ ಸೇರಿದಂತೆ ನಾನಾ ಕಾರ್ಯಕ್ರಮಗಳು ಜರುಗಿದವು. ಮಾಜಿ ಶಾಸಕ ಟಿ.ಎಚ್.ಸುರೇಶಬಾಬು, ಪುರಸಭೆ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.