ಬುಡಕಟ್ಟು ಜನಾಂಗದ ಮಕ್ಕಳಿಗೆ ಚಿತ್ರಕಲಾ ಕಾರ್ಯಾಗಾರ

12-GPT-2A
Published on

ಗುಂಡ್ಲುಪೇಟೆ: ಅರಣ್ಯ ಇಲಾಖೆ, ಮೈಸೂರಿನ ಶ್ರೀ ಕಲಾನಿಕೇತನ ಸೂ ್ಕಲ್ ಆಫ್ ಆರ್ಟ್ ಮತ್ತು ಫೋಟೋ ಜರ್ನಲಿಸಂ ಅಕಾಡೆಮಿ ಸಹಯೋಗದಲ್ಲಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಬುಡಕಟ್ಟು ಜನಾಂಗದ ಮಕ್ಕಳಿಗಾಗಿ ಎರಡು ದಿನಗಳ ಚಿತ್ರಕಲಾ ಕಾರ್ಯಾಗಾರ ಬುಧವಾರ ಬಂಡೀಪುರದಲ್ಲಿ ಆರಂಭವಾಯಿತು.
ಕಾರ್ಯಕ್ರಮವನ್ನು ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಬುಡಕಟ್ಟು ಜನಾಂಗದ ಕಲೆ ಹಾಗೂ ಆಚರಣೆಗಳು ನಶಿಸಿಹೋಗುತ್ತಿದ್ದು ಇದನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಆದ್ದರಿಂದ ಅರಣ್ಯ ಇಲಾಖೆ ಮುಂದಿನ ಜನಾಂಗಕ್ಕೆ ಇವುಗಳನ್ನು ಉಳಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿಎ ಎಂದು ಹೇಳಿದರು.

ಶ್ರೀ ಕಲಾನಿಕೇತನ ಕಾಲೇಜಿನ ಪ್ರಾಚಾರ್ಯ ಮಹದೇವಶೆಟ್ಟಿ, ಎಸಿಎಫ್‌ಗಳಾದ ನವೀನ್, ರವೀಂದ್ರ, ಕೆ.ಪರಮೇಶ್, ಆರ್‌ಎಫ್‌ಒ ಗಳಾದ ದೀಪಾ, ಎಂ.ಆರ್.ಮಂಜುನಾಥ್, ಮದ್ದೂರು ಕಾಲನಿ, ಕಾರೇಮಾಳ, ಚೆನ್ನೀಕಟ್ಟೆ, ಮೇಲುಕಾಮನಹಳ್ಳಿ ಹಾಡಿ, ಕೆಬ್ಬೇಪುರ, ಬಾಚಹಳ್ಳಿ ಮುಂತಾದ ಭಾಗಗಳ ಸುಮಾರು 35 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net