ಬುಕ್ಕಸಾಗರ ಗ್ರಾಪಂಗೆ ಹನುಮಂತಪ್ಪ ಅವಿರೋಧ ಆಯ್ಕೆ

hpt
Published on

ಹೊಸಪೇಟೆ: ತಾಲೂಕಿನ ಬುಕ್ಕಸಾಗರ ಗ್ರಾಪಂಗೆ ಅಧ್ಯಕ್ಷ ವಿ.ಕೆ.ಹನುಮಂತಪ್ಪ , ಉಪಾಧ್ಯಕ್ಷೆಯಾಗಿ ರಮಾದೇವಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.


ಅಧ್ಯಕ್ಷ ಪ.ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಪ.ಪಂಗಡಕ್ಕೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ವಿ.ಕೆ.ಹನುಮಂತಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಮಾದೇವಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದರು ಎಂದು ಚುನಾವಣಾಧಿಕಾರಿ ಸಿಡಿಪಿಒ ಬಿ.ಟಿ.ಬೋಗೇಶ್ ಘೋಷಿಸಿದರು.

ವಿ.ಕೆ.ಹನುಮಂತಪ್ಪ ಐದು ಬಾರಿ ಗ್ರಾಪಂ ಸದಸ್ಯ, ಎರಡು ಬಾರಿ ಉಪಾಧ್ಯಕ್ಷರಾಗಿದ್ದು, ಇದೇ ಮೊದಲ ಬಾರಿ ಅಧ್ಯಕ್ಷರಾಗಿದ್ದಾರೆ. ಪಿಡಿಒ ಪೂರ್ಣತೇಜ ಕುರಟ್ಟಿ, ಸದಸ್ಯರಾದ ದ್ಯಾವಮ್ಮ ವಡ್ರು, ಎಸ್.ಎಂ.ಜಡೆಯ್ಯಸ್ವಾಮಿ, ರಮೇಶಕುಮಾರ್, ಡಿ.ಜಿ.ಚನ್ನಬಸಮ್ಮ, ಹನುಮಕ್ಕ, ಲಕ್ಷ್ಮಿ ಹರಿಜನ, ಬಿ.ಶಶಿಧರ, ಶೆಕ್ಷಾವಲಿ, ಶೈನಾಜ್‌ಬೇಗಮ್, ರೇವಣ್ಣ, ವಾಣಿ, ಎ.ಶಂಕ್ರಪ್ಪ, ವರಲಕ್ಷ್ಮೀ, ಗೊಂಚಗೇರಿ ತಿಮ್ಮಪ್ಪ, ಜಿ.ಮಲ್ಲೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net