ಬೀರುವಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ

17 krp 02 (1)
ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಆರ್‌ಟಿಒ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಧ್ವಜಾರೋಹಣ ನೆರವೇರಿಸಿದರು.
Published on

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಮಾಜ ಸೇವಕ ಹಾಗೂ ಆರ್‌ಟಿಒ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ತಾಲೂಕಿನ ಜನತೆ ತೋರಿಸುತ್ತಿರುವ ಪ್ರೀತಿ, ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸ ಹಾಗೂ ಪ್ರೀತಿಗೆ ಚ್ಯುತಿ ಬಾರದಂತೆ ಮುಂದಿನ ದಿನಗಳಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಪಟ್ಟಣದ ಜಯನಗರ ಬಡಾವಣೆಯಿಂದ ತಾಲೂಕಿನ ಚಂದಗೋಳಮ್ಮ ದೇವಾಲಯದವರೆಗೆ ಆಟೋಗಳ ಮೆರವಣಿಗೆ ಹಾಗೂ ಬೈಕ್ ರ‌್ಯಾಲಿ ನಡೆಯಿತು. ರ‌್ಯಾಲಿಯಲ್ಲಿ ಕನ್ನಡ ಬಾವುಟ ಮತ್ತು ಮಲ್ಲಿಕಾರ್ಜುನ್ ಅವರ ಫೋಟೋಗಳು ರಾರಾಜಿಸಿದವು.

ತಾಪಂ ಮಾಜಿ ಸದಸ್ಯರಾದ ಮೂಡನಹಳ್ಳಿ ನಾಗೇಂದ್ರ, ಬೀರುವಳ್ಳಿ ರಾಮೇಗೌಡ, ಬಂಡಿಹೊಳೆ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಾಯಿ ಮಂಜೇಗೌಡ, ಶಶಿಧರ್ ಮಾಡುವಿನಕೋಡಿ ಉಮೇಶ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮುದ್ದು ಪ್ರಸಾದ್, ಉಪಾಧ್ಯಕ್ಷ ಪ್ರದೀಪ್, ಬಂಡಿಹೊಳೆ ದೇವರಾಜು, ಪ.ನಾಗೇಗೌಡ, ಪ್ರದೀಪ್, ಮುತ್ತುರಾಜ್, ಅರುಣ್, ಮಂಜುನಾಥ್, ಮಹೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net