

ಮೈಸೂರು: ತಾಲೂಕಿನ ಬೀರಿಹುಂಡಿ ಗ್ರಾಮ ಹಾಗೂ ಬೀರಿಹುಂಡಿ ವೃತ್ತದಲ್ಲಿರುವ ಎರಡು ಅಂಗಡಿಗಳಲ್ಲಿ ಒಂದೇ ದಿನ ರಾತ್ರಿ ಕಳ್ಳತನವಾಗಿದೆ.
ಬೀರಿಹುಂಡಿ ಗ್ರಾಮದ ರಘು, ಮೈಸೂರು-ಗದ್ದಿಗೆ ಮುಖ್ಯರಸ್ತೆಯ ಬೀರಿಹುಂಡಿ ಸರ್ಕಲ್‌ನಲ್ಲಿ ಹರ್ಷ ಮೊಬೈಲ್ ಸ್ಟೋರ್ ಇಟ್ಟುಕೊಂಡಿದ್ದರು. ರೋಲಿಂಗ್ ಶೆಲ್ಟರ್ ಅನ್ನು ಮೀಟಿ ಕಳ್ಳತನ ಮಾಡಿದ್ದು, ಸಿಸಿ ಕ್ಯಾಮರಾದ ಡಿವಿಆರ್ ಹಾಗೂ 3 ಸಾವಿರ ಹಣವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಔಷಧ ಅಂಗಡಿಯಲ್ಲಿ ಕಳವು: ಬೀರಿಹುಂಡಿ ಗ್ರಾಮದ ಜಯಪುರ ರಸ್ತೆಯ ಶ್ರೀ ರಾಘವೇಂದ್ರ ಮೆಡಿಕಲ್ಸ್ ಅಂಗಡಿಯಲ್ಲಿ ಕಳ್ಳತನವಾಗಿದೆ.
ರಮೇಶ್ ಅವರ ಔಷಧ ಅಂಗಡಿಯಲ್ಲಿ ಇದು ನಡೆದಿದ್ದು, ಖದೀಮರು ರೋಲಿಂಗ್ ಶೆಲ್ಟರ್ ಮುರಿದು, ಸಿಸಿ ಕ್ಯಾಮೆರಾದ ಡಿವಿಆರ್ ಲಿಂಕ್ ತುಂಡರಿಸಿದ ನಂತರ ಮಳಿಗೆಯೊಳಗೆ ನುಗ್ಗಿ 18 ಸಾವಿರ ಹಣವನ್ನು ದೋಚಿದ್ದಾರೆ.
ಬಳಿಕ ಪಕ್ಕದಲ್ಲಿರುವ ಮಹದೇವಸ್ವಾಮಿ ಅವರ ಪ್ರಾವಿಷನ್ ಸ್ಟೋರ್‌ಗೂ ನುಗ್ಗಲು ಪ್ರಯತ್ನಿಸಿದ್ದಾರೆ. ಆದರೆ ಅದರ ರೋಲಿಂಗ್ ಶೆಲ್ಟರ್ ಮೀಟಲು ಸಾಧ್ಯವಾಗದೆ ವಾಪಸಾಗಿದ್ದಾರೆ.
ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.