

ಚಿಕ್ಕಮಗಳೂರು: ೭ನೇ ವಯಸ್ಸಿಗೆ ಆರೆಸ್ಸೆಸ್ ಸೇರಿ ಸಂಘಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದಲ್ಲದೆ ಚಿಕ್ಕಮಗಳೂರು ನಗರಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿ ಕಾಫಿ ನಾಡಿನ ಬಿಜೆಪಿ ಪ್ರಮುಖ ನಾಯಕರಿಗೆ ಮಾರ್ಗದರ್ಶಕರಾಗಿಯೂ ಇದ್ದ ಚಿಕ್ಕಮಗಳೂರು ಬಿಜೆಪಿ ಭೀಷ್ಮ ಎಂದೇ ಖ್ಯಾತಿ ಪಡೆದಿದ್ದ ವಿಠಲ್ ಆಚಾರ್ಯ ಇಂದು ತನ್ನ ಮಕ್ಕಳಿಂದಲೇ ಮನೆಯಿಂದ ಹೊರದಬ್ಬಲ್ಪಟ್ಟು ಬೀದಿಯಲ್ಲಿ ತಮ್ಮ ಸಂಧ್ಯಾಕಾಲ ಕಳೆಯುತ್ತಿದ್ದಾರೆ.
ವಿಠಲ್ ಆಚಾರ್ಯ ೯೨ ವರ್ಷದ ವಯೋವೃದ್ಧ. ಚಿಕ್ಕಮಗಳೂರು ಬಿಜೆಪಿಯ ಭೀಷ್ಮ ಎಂದೇ ಖ್ಯಾತಿ. ಆರ್‌ಎಸ್‌ಎಸ್ ಕಟ್ಟಾಳು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ, ಡಿ.ಎಚ್.ಶಂಕರಮೂರ್ತಿ, ಪಿ.ಜಿ.ಆರ್.ಸಿಂಧ್ಯಾ, ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಜೈಲು ವಾಸ ಅನುಭವಿಸಿದ್ದರು. ಇವರ ಶಿಷ್ಯಂದಿರೇ ಸಿ.ಟಿ.ರವಿ ಹಾಗೂ ಕಾರ್ಕಳ ಶಾಸಕ ಸುನೀಲ್ ಕುಮಾರ್. ಆದರೆ ಇಂದು ಬೀದಿಯಲ್ಲಿ ಜೀವನ ನಡೆಸುವಂತಾಗಿರುವುದು ದುರಂತವೇ ಸರಿ.
ಸಮಾಜದ ಉದ್ದಾರಕ್ಕಾಗಿ ವಿಠಲ ಆಚಾರ್ಯ ತಮ್ಮ ಜೀವನದಲ್ಲಿ ೧೦೭ ಪ್ರಕೃತಿ ಯಜ್ಞ ಮಾಡಿದ್ದಾರೆ. ಈ ಯಜ್ಞ ಮುಂದುವರಿಸಲು ತಮಗೆ ಸೇರಿದ ಸೈಟನ್ನು ೨೫ ಲಕ್ಷ ರೂಪಾಯಿ ಮಾರಾಟ ಮಾಡಲು ಸಿದ್ಧವಿರುವ ಹಿರಿಯ ಜೀವ. ಪ್ರಕೃತಿ ಯಜ್ಞಕ್ಕೆ ಹಾಕುವ ವಸ್ತುಗಳು ಕಾರ್ಬನ್ ಡೈಆಕ್ಸೆಡ್ ಆದರೂ ಕೂಡ ಪ್ರಕೃತಿ ಅದನ್ನ ಪಡೆದು ನಮಗೆ ಆಕ್ಸಿಜನ್ ನೀಡುತ್ತೆ. ಅದು ನಿಲ್ಲಬಾರದು. ಯಜ್ಞ ನಿಲ್ಲಬಾರದು ಎಂದು ಬ್ಯಾಂಕಿನಲ್ಲಿ ೨೫ ಲಕ್ಷ ರೂ. ಹಣವಿಟ್ಟು ಪ್ರತಿವರ್ಷ ಯಜ್ಞ ಮಾಡುತ್ತಿದ್ದರಂತೆ. ಆದರೆ ತಮ್ಮ ಮರಣಾನಂತರವೂ ಈ ಯಜ್ಞ ನಿಲ್ಲಬಾರದು ಎಂದು ತಮಗೆ ಸೇರಿದ ಸೈಟ್ ಮಾರಾಟ ಮಾಡಿ ಅದರಲ್ಲಿ ಬರುವ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟು ಅಥವಾ ಸೈಟ್‌ನಲ್ಲಿ ಕಾಂಪ್ಲೆಕ್ಸ್ ಕಟ್ಟಿಸಿ ಟ್ರಸ್ಟ್ ಸ್ಥಾಪನೆ ಮಾಡಿ ಕಾಂಪ್ಲೆಕ್ಸ್ ಅಥವಾ ಸೈಟ್ ಮಾರಿದ್ದರಿಂದ ಬರುವ ಹಣದಿಂದ ಯಜ್ಞ ಮುಂದುವರಿಸಬೇಕು ಎಂಬುದು ವಿಠಲ್ ಆಚಾರ್ಯ ಅವರ ಕೊನೆ ಆಸೆಯಾಗಿದೆ.
ವಿಠಲ್ ಆಚಾರ್ಯ ಮೂಲತಃ ಉಡುಪಿ ಜಿಲ್ಲೆಯವರು. ಆದರೆ ಅವರ ಕರ್ಮಭೂಮಿ ಕಾಫಿನಾಡು ಚಿಕ್ಕಮಗಳೂರು. ದಶಕಗಳಿಂದ ಚಿಕ್ಕಮಗಳೂರಿನಲ್ಲೇ ನೆಲೆಯೂರಿರೋ ಇವರು ಆರ್‌ಎಸ್‌ಎಸ್ ಕಟ್ಟಾಳು. ೭ನೇ ವಯಸ್ಸಿನಿಂದ ೮೪ನೇ ವಯಸ್ಸಿನವರೆಗೆ ಸಂಘಕ್ಕಾಗಿ ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರು ನಗರಸಭೆ ಸದಸ್ಯರಾಗಿದ್ದ ಇವರು, ಜನಸಂಘದಿAದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ದತ್ತಪೀಠದ ಹೋರಾಟದಲ್ಲಿ ಸಿ.ಟಿ.ರವಿ ಹಾಗೂ ಕಾರ್ಕಳ ಸುನೀಲ್ ಕುಮಾರ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು.
ವಿಠಲ್ ಆಚಾರ್ಯ ಅವರಿಗೆ ನಾಲ್ವರು ಗಂಡು ಹಾಗೂ ಓರ್ವ ಹೆಣ್ಣು ಮಗಳಿದ್ದಾರೆ. ಎಲ್ಲರು ಡಾಕ್ಟರ್ ಹಾಗೂ ಇಂಜಿನಿಯರ್‌ಗಳಾಗಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿ ಇದ್ದರು, ಮಕ್ಕಳು ತನಗೆ ಮೋಸ ಮಾಡಿ ಮನೆಯಿಂದ ಹೊರಹಾಕಿದ್ದಾರೆ. ಹೀಗಾಗಿ ಮನೆಯ ಎದುರೇ ಬೀದಿಯಲ್ಲಿ ವಾಸಿಸುತ್ತಾ ಪ್ರತಿಭಟನೆ ಮಾಡುತ್ತಿz್ದೆÃನೆ ಎನ್ನುತ್ತಾರೆ ವಿಠಲ್ ಆಚಾರ್ಯ.