

ಹುಮನಾಬಾದ್: ಹಳ್ಳಿಖೇಡ (ಬಿ)ದಲ್ಲಿ ಶುಕ್ರವಾರ ಡೇನಲ್ಮ್ ಪಿಎಂ ಸ್ವನಿಧಿ ಯೋಜನೆ ಅಡಿ ಪಟ್ಟಣದ ಎಲ್ಲ ಬ್ಯಾಂಕ್‌ಗಳು ಹಾಗೂ ಪುರಸಭೆ ಆಶ್ರಯದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವಿಶೇಷ ಸಾಲ ಮೇಳದಲ್ಲಿ ಫಲಾನುಭವಿಗಳಿಗೆ ಕ್ಯೂಆರ್ ಕೋಡ್ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ಅಶೋಕ ಚನ್ನಕೋಟೆ ಮಾತನಾಡಿ, ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಂಡು, ಆರ್ಥಿಕ ಸಬಲತೆ ಹೊಂದಬೇಕು ಎಂದು ಕರೆ ನೀಡಿದರು.
೫೨ ಜನ ಬೀದಿಬದಿ ವ್ಯಾಪಾರಿಗಳಿಗೆ ಕ್ಯೂ ಆರ್ ಕೋಡ್ ನೀಡಲಾಯಿತು. ೨೦ ಜನ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡಲಾಯಿತು. ಕೌಶಲ ಅಭಿವೃದ್ಧಿ ಇಲಾಖೆ ಮಿಷನ್ ಮ್ಯಾನೇಜರ್ ಭೀಮಣ್ಣ, ಪುರಸಭೆ ಸಮುದಾಯ ಸಂಘಟನಾಧಿಕಾರಿ ಉಮೇಶ ಹಿರೇಮಠ, ಎಸ್‌ಬಿಐ ವ್ಯವಸ್ಥಾಪಕ ಭರತ್‌ಕುಮಾರ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಕುಮಾರ, ಅಸಿಸ್ಟೆಂಟ್ ಮ್ಯಾನೇಜರ್ ನವೀನ್‌ಕುಮಾರ, ಸಿಆರ್‌ಪಿ ವಿಜಯಲಕ್ಷಿ, ಸುವರ್ಣ ಇತರರಿದ್ದರು.