ಬೀದಿಬದಿ ವ್ಯಾಪಾರಸ್ಥರ ಸಂಘದ ತಾಲೂಕು ಸಮಾವೇಶ

28M.D.R.3
ಮದ್ದೂರು ತಾಲೂಕು ಬೀದಿಬದಿ ವ್ಯಾಪಾರಸ್ಥರ ಸಂಘದ ತಾಲೂಕು ಸಮಾವೇಶವನ್ನು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಉದ್ಘಾಟಿಸಿದರು. ರಾಮು, ವಿ.ಶಿವಕುಮಾರ್, ರೂಪಾ, ಅಬ್ದುಲ್‌ಪಾಷ ಇದ್ದರು.
Published on

ಮದ್ದೂರು: ಪಟ್ಟಣದ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಮದ್ದೂರು ತಾಲೂಕು ಬೀದಿಬದಿ ವ್ಯಾಪಾರಸ್ಥರ ಸಂಘದ ತಾಲೂಕು ಸಮಾವೇಶ ಆಯೋಜಿಸಲಾಗಿತ್ತು. \


ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಲಸೌಲಭ್ಯ ಪಡೆಯಲು, ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಯುವ ಶೋಷಣೆ ಮತ್ತು ದೌರ್ಜನ್ಯ ಹಿಮ್ಮೆಟ್ಟಿಸಲು ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.


ನೂತನ ಸಮಿತಿ ಆಯ್ಕೆ: ತಾಲೂಕು ಬೀದಿ ಬದಿ ವ್ಯಾಪಾರಸ್ಥರ ಸಂಘದ ತಾಲೂಕು ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ ಪಾಷ, ಕಾರ್ಯದರ್ಶಿಯಾಗಿ ರೂಪಾ, ಖಜಾಂಚಿಯಾಗಿ ಜಯರಾಂ, ಉಪಾಧ್ಯಕ್ಷರಾಗಿ ಎಸ್.ಬಿ.ರಾಮು, ಮಹಾಲಕ್ಷ್ಮೀ, ಸಾಕಮ್ಮ, ಸಹಕಾರ್ಯದರ್ಶಿಯಾಗಿ ಕುಮಾರ್, ಶ್ರೀನಿವಾಸ್, ಸುರೇಶ್ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.


ಸಂಘದ ಜಿಲ್ಲಾಧ್ಯಕ್ಷ ರಾಮು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಶಿವಕುಮಾರ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೂಪಾ, ಪದಾಧಿಕಾರಿಗಳಾದ ಅಬ್ದುಲ್ ಪಾಷ, ಜಯರಾಂ, ವೆಂಕಟೇಶ, ಮಹಾಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net