ಬೀದಿನಾಯಿ ನಿಯಂತ್ರಣಕ್ಕೆ "ಸಂತಾನ ಶಕ್ತಿಹರಣ' : 1 ನಾಯಿಗೆ 1500 ರೂ., ವೆಚ್ಚ

26Tmk_Palike_Dog
Published on

ತುಮಕೂರು

ಸಂತಾನ ಶಕ್ತಿಹರಣದ ಮೂಲಕ ಬೀದಿನಾಯಿಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ಒಂದು ಬೀದಿನಾಯಿ ಶಸಚಿಕಿತ್ಸೆಗೆ 1500 ರೂ.ವೆಚ್ಚ ಮಾಡುತ್ತಿದ್ದು ಸಂತಾನ ಶಕ್ತಿಹರಣಕ್ಕಾಗಿ ಪಾಲಿಕೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ.

ಬೀದಿನಾಯಿ, ಹಂದಿಗಳು ಹಾಗೂ ಬಿಡಾಡಿ ದನಗಳ ಹಾವಳಿಯಿಂದ ಸ್ಮಾರ್ಟ್​ಸಿಟಿ ಜನರು ರೋಸಿಹೋಗಿದ್ದು ಪ್ರತಿನಿತ್ಯ ಪಾಲಿಕೆಗೆ ದೂರು ನೀಡಿ ಬೇಸರಗೊಂಡಿದ್ದ ತುಮಕೂರಿಗರು ಈಗ ನಿರಾಳರಾಗುವ ಸುದ್ದಿಹೊರಬಿದ್ದಿದೆ. ಗುರುವಾರದಿಂದಲೇ ಬೀದಿನಾಯಿ ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ.

ಪಶುಸಂಗೋಪನಾ ಇಲಾಖೆ ಪ್ರಕಾರ 2021ರ ನವೆಂಬರ್​ ವರದಿ ಪ್ರಕಾರ ಇಡೀ ನಗರದಲ್ಲಿ 2 ಸಾವಿರ ಬೀದಿನಾಯಿಗಳಿವೆ. ಆದರೆ, ಪ್ರತಿ ವಾರ್ಡ್​ನಲ್ಲಿ 300 ರಿಂದ 500 ಬೀದಿನಾಯಿಗಳಿದ್ದು ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ದಿನೇದಿನೆ ಹೆಚ್ಚುತ್ತಿರುವ ಬೀದಿನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಪಾಲಿಕೆ ಈಗ 1 ನಾಯಿಗೆ 1500 ರೂ.ನಂತೆ ವ್ಯಯಿಸುತ್ತಿದೆ. ಬೀದಿನಾಯಿಗಳ ನಿಯಂತ್ರಣಕ್ಕಾಗಿ ಪಾಲಿಕೆ ಬಜೆಟ್​ನಲ್ಲಿ 35 ಲಕ್ಷ ರೂ. ಮೀಸಲಿರಿಸಿದ್ದು ನಗರದಲ್ಲಿ ಸಂಪೂರ್ಣ ನಾಯಿಗಳ ನಿಯಂತ್ರಣಕ್ಕೆ ಹತ್ತಿರಹತ್ತಿರ 1 ರಿಂದ 1.5 ಕೋಟಿ ರೂ. ವೆಚ್ಚಮಾಡಬೇಕಿದೆ.

ಬೆಂಗಳೂರಿನ ಅಸ್ರಾ (ಎಎಸ್​ಆರ್​ಎ) ಸಂಸ್ಥೆಯು ಬೀದಿನಾಯಿಗಳ ಸಂತಾನ ಶಕ್ತಿಹರಣ ಶಸಚಿಕಿತ್ಸೆ ಗುತ್ತಿಗೆ ಪಡೆದುಕೊಂಡಿದೆ. ಈ ಸಂಸ್ಥೆಯ 8 ನುರಿತ ಸಿಬ್ಬಂದಿ ಬೀದಿನಾಯಿಗಳನ್ನು ಸುರಕ್ಷಿತವಾಗಿ ಹಿಡಿದು, ಲಸಿಕೆ ಹಾಕಿ ಶಸಚಿಕಿತ್ಸೆಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿರುವ ತುಮಕೂರಿನ ಹೊರವಲಯದ ಶಸಚಿಕಿತ್ಸಾ ಟಕಕ್ಕೆ ಸ್ಥಳಾಂತರಿಸುವ ಕೆಲಸ ಮಾಡುತ್ತಾರೆ. ಅಲ್ಲಿ ಪಶುವೈದ್ಯರ ನೇತೃತ್ವದಲ್ಲಿ ನಾಲ್ವರು ಸಂತಾನ ಶಕ್ತಿಹರಣ ಶಸಚಿಕಿತ್ಸೆ ನಡೆಸಿ, ಆರೈಕೆ ಮಾಡುತ್ತಾರೆ. ನಂತರ ಶಸಚಿಕಿತ್ಸೆಗೆ ಒಳಪಟ್ಟ ನಾಯಿಗಳನ್ನು ಪುನ@ ಅವುಗಳು ಮೊದಲಿದ್ದ ಸ್ಥಳಕ್ಕೇ ತಂದು ಬಿಡಲಾಗುವುದು.

ಅಸ್ರಾ ಸಂಸ್ಥೆಗೆ ಗುತ್ತಿಗೆ: ಪ್ರಾಣಿ ಜನನ ನಿಯಂತ್ರಣ (ನಾಯಿಗಳು) 2011ರ ನಿಯಮಗಳ ಪ್ರಕಾರ ಬೆಂಗಳೂರಿನ ಅಸ್ರಾ (ಎಎಸ್​ಎಆರ್​) ಸರ್ಕಾರೇತರ ಸಂಸ್ಥೆ ಬೀದಿನಾಯಿಗಳ ಸಂತಾನಹರಣ ಶಸಚಿಕಿತ್ಸೆ ಗುತ್ತಿಗೆ ಪಡೆದುಕೊಂಡಿದೆ. ತುಮಕೂರಿನ ಹೊರವಲಯದ ಹೊನ್ನುಡಿಕೆ ಹ್ಯಾಂಡ್​ಪೋಸ್ಟ್​ ಬಳಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶಸಚಿಕಿತ್ಸಾ ಟಕದಲ್ಲಿ ಸಂತಾನ ಶಕ್ತಿಹರಣ ಶಸಚಿಕಿತ್ಸೆ ಮಾಡಲಾಗುವುದು. ಪಶುವೈದ್ಯರ ನೇತೃತ್ವದಲ್ಲಿ ನಾಲ್ವರು ಸಿಬ್ಬಂದಿ ಸಂತಾನ ಶಕ್ತಿಹರಣ ಶಸಚಿಕಿತ್ಸೆ ಮಾಡಲಿದ್ದಾರೆ. 2 ದಿನಗಳ ಉಪವಾಸಗಳ ಬಳಿಕ ಶಸಚಿಕಿತ್ಸೆ ಮಾಡಿ 3 ರಿಂದ 7 ದಿನ ಶಸಚಿಕಿತ್ಸೆಗೊಳಪಟ್ಟ ನಾಯಿಗಳ ಆರೈಕೆ, ಶುಶ್ರೂಷೆ ಬಳಿಕ ಅವುಗಳನ್ನು ಮತ್ತೆ ಸೆರೆಹಿಡಿದ ಸ್ಥಳಕ್ಕೆ ಬಿಡಲಾಗುವುದು.

2 ಪ್ಯಾಕೇಜ್​, ಒಂದು ಟೆಂಡರ್​! ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನ ಶಕ್ತಿಹರಣ ಶಸಚಿಕಿತ್ಸೆಗೆ 2 ಪ್ಯಾಕೇಜ್​ಗಳನ್ನು ಮಾಡಿ ಟೆಂಡರ್​ ಕರೆಯಲಾಗಿತ್ತು. ಮೊದಲ ಪ್ಯಾಕೇಜ್​ನಲ್ಲಿ 1 ರಿಂದ 13ನೇ ವಾರ್ಡ್​ ಹಾಗೂ 2ನೇ ಪ್ಯಾಕೇಜ್​ನಲ್ಲಿ 14 ರಿಂದ 35ನೇ ವಾರ್ಡ್​ವರೆಗೆ ಬೀದಿನಾಯಿಗಳ ಸಂತನಾಹರಣ ಶಸಚಿಕಿತ್ಸೆ ಕೈಗೊಳ್ಳಲಾಗುವುದು. ಗುರುವಾರದಿಂದ ವಾರ್ಡ್​ ನಂ.1 ರಿಂದ ಕಾರ್ಯಾಚರಣೆ ಆರಂಭವಾಗಿದ್ದು ಇನ್ನೆರಡು ದಿನಗಳ 2ನೇ ಪ್ಯಾಕೇಜ್​ನ ವಾರ್ಡ್​ಗಳಲ್ಲೂ ನಾಯಿ ಸೆರೆಹಿಡಿಯುವ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗುವುದು.

ಕಿವಿಗೆ ಟ್ಯಾಗ್​ ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸಚಿಕಿತ್ಸೆಗೆ ಪ್ರತಿನಿತ್ಯ 25 ರಿಂದ 30 ನಾಯಿಗಳನ್ನು ಸೆರೆಹಿಡಿಯಲಾಗುವುದು. ಬಳಿಕ ಶಸಚಿಕಿತ್ಸೆ ಮಾಡಿ ಶುಶ್ರೂಷೆ, ಆರೈಕೆ ಮಾಡಲಾಗುವುದು. ಶಸಚಿಕಿತ್ಸೆಗೊಳಪಟ್ಟ ನಾಯಿಗಳ ಕಿವಿಗೆ ಟ್ಯಾಗ್​ ಹಾಕಲಾಗುವುದು. ಬೆಂಗಳೂರಿನ ಅಸ್ರಾ ಸಂಸ್ಥೆಗೆ ಮಾರ್ಚ್​ನಲ್ಲೇ ಕಾರ್ಯಾದೇಶ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net