ಬೀದಿನಾಯಿ ದಾಳಿಗೆ 6 ವರ್ಷದ ಮಗು ಸಾವು

Published on

ತಿಪಟೂರು:ಬೀದಿಯಲ್ಲಿ ಆಟವಾಡುತ್ತಿದ್ದ 6 ವರ್ಷದ ಮಗುವಿನ ಮೇಲೆ ಬೀದಿನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ ಮಗು ಮೃತಪಟ್ಟಿದೆ. ತಾಲೂಕಿನ ಕಸಬಾ ಹೋಬಳಿ ಅಯ್ಯನಬಾವಿ ಗ್ರಾಮದ ನಿವಾಸಿ ಮಹಲಿಂಗಯ್ಯ ಅವರ ಪುತ್ರಿ ನವ್ಯಾ ಮೃತೆ. ಅಯ್ಯನಬಾವಿ ಗ್ರಾಮದ ಮನೆ ಮುಂದೆ ಆಟವಾಡುತ್ತಿದ್ದ ನವ್ಯಾಳ ಮೇಲೆ ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿನಡೆಸಿ ತಲೆ ಹಾಗೂ ಹೊಟ್ಟೆ ಭಾಗವನ್ನು ತಿಂದು, ಕೈ, ಕಾಲು ತೊಡೆಭಾಗವನ್ನು ಕಿತ್ತುಹಾಕಿವೆ. ರಕ್ತದ ಮಡುವಿನಲ್ಲಿ ಚೀರಾಡುತ್ತಿದ್ದ ಮಗುವನ್ನು ಕಂಡ ಸಾರ್ವಜನಿಕರು ನಾಯಿಗಳ ಹಿಂಡನ್ನು ಓಡಿಸಿ ತಕ್ಷಣ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಿಸದೆ ಮಗು ಮೃತಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net