

ವಿಜಯಪುರ:ಆಲಮೇಲದಲ್ಲಿ ಬೀದಿ ನಾಯಿ ಕಾಟ ಶುರುವಾಗಿದ್ದು, ಬೀದಿ ನಾಯಿ ಕಡಿತದಿಂದ ಮಕ್ಕಳು ಸೇರಿ 11 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಜಯಪುರ ಜಿಲ್ಲೆ ಆಲಮೇಲ ಪಟ್ಟಣದ ಗಾಂಧಿಚೌಕ ಹಾಗೂ ತಳಕೇರಿ ಓಣಿಯಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ಜನ್ರೆಲ್ಲ ಹಬ್ಬದ ಮೂಡ್ ನಲ್ಲಿದ್ದ ವೇಳೆ ಬೀದಿನಾಯಿ ಕಡಿದಿದೆ. ಮಕ್ಕಳಿಗೆ ಕಡಿಯುತ್ತಿರುವ ವೇಳೆ ಬಿಡಿಸಲು ಹೋದ ಪಾಲಕರು ಸಹ ನಾಯಿ ಕಡಿತಕ್ಕೊಳಗಾಗಿದ್ದಾರೆ. ಸಿಕ್ಕಸಿಕ್ಕವರನ್ನೆಲ್ಲ ಕಡಿಯುತ್ತಿದ್ದ ಬೀದಿನಾಯಿಯನ್ನು ಸ್ಥಳೀಯರು ಕೊಂದು ಹಾಕಿದ್ದು, ಇದು ಹುಚ್ಚುನಾಯಿ ಇರಬಹುದು ಎಂದು ಶಂಕಿಸಲಾಗಿದೆ. ಗಾಯಗೊಂಡ 11 ಜನರು ಆಲಮೇಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿದೆ.