

ಶಹಾಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದುಪಡಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕಾದಲ್ಲಿನ ಹೇಳಿಕೆ ಖಂಡಿಸಿ ಬಿಜೆಪಿ ಎಸ್‌ಸಿ, ಎಸ್‌ಟಿ ಮೋರ್ಚಾ ಪದಾಧಿಕಾರಿಗಳು ಹಾಗೂ ಕರ‍್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಲೋಕಸಭೆ ಸಭಾಪತಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಸ್‌ಸಿ ಮೋರ್ಚಾ ನಗರಾಧ್ಯಕ್ಷ ಲಕ್ಷಿö್ಮÃಕಾಂತ ಬಿರಾಳ್, ದಲಿತ ವಿರೋಧಿ ಹೇಳಿಕೆ ನೀಡಿರುವ ರಾಹುಲ್‌ಗಾಂಧಿ ಅವರ ಸಂಸದ ಸ್ಥಾನ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಎಸ್‌ಸಿ ಮೋರ್ಚಾದ ಗ್ರಾಮೀಣ ಘಟಕದ ಅಧ್ಯಕ್ಷ ಶಾಂತಕುಮಾರ ಪವಾರ್ ಮಾತನಾಡಿ, ಮೀಸಲಾತಿ ರದ್ದುಪಡಿಸುವುದಾಗಿ ಹೇಳಿರುವ ರಾಹುಲ್‌ಗಾಂಧಿ ನಡೆ ಮತ್ತು ದಲಿತ ವಿರೋಧಿ ನೀತಿಯನ್ನು ದೇಶದ ಎಲ್ಲ ದಲಿತರು ಖಂಡಿಸಬೇಕು ಎಂದರು.
ನಗರದ ಮಂಡಲ ಅಧ್ಯಕ್ಷ ಚಂದ್ರಶೇಖರ ಯಾಳಗಿ ಮಾತನಾಡಿ, ಈ ಕೂಡಲೇ ಸಂಸದ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜಿನಾಮೆ ನೀಡಿಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳಾದ ದೇವಿಂದ್ರಪ್ಪ ಬಂದೊಡ್ಡಿ, ರಾಮರಾಜ ನಾಯಕ ವನದುರ್ಗ, ಗುರು ಕಾಮಾ, ಬಾಲಕೃಷ್ಣ ಹುಲಕಲï, ಶರಣು ಮಂಡಗಳ್ಳಿ, ಕರಬಸಪ್ಪ ಬಿರಾಳ, ಮೌನೇಶ ಹಯ್ಯಾಳಕರ, ಮಲ್ಲಿಕಾರ್ಜುನ ಚಿ¯್ಲÁಳ, ಶಿವರಾಜ ದೇಶಮುಖ, ಅಡಿವೆಪ್ಪ ಜಾಕಾ, ಮಲ್ಲಿಕಾರ್ಜುನ ಕಂದಕೂರ, ಬಸವರಾಜ ಆರುಣಿ, ದೇವಿಂದ್ರಪ್ಪ ಕೊನೇರ, ಕರಣ ಸುಬೇದಾರ, ಸುನೀಲï ಚವ್ಹಾಣ್, ಅವಿನಾಶ ಗುತ್ತೇದಾರ್, ಮಲ್ಲಿನಾಥ ಬಡಿಗೇರ, ಶಕುಂತಲಾ, ರಮಾದೇವಿ, ಅಬ್ದಲ್ ಹಾದಿಮನಿ, ಸಿದ್ದಯ್ಯ ಸ್ವಾಮಿ ಹಿರೇಮಠ, ರಾಘವೇಂದ್ರ ಯP್ಷÀಂತಿ, ಮಹೇಶ ರಸ್ತಾಪುರ, ರಾಜು ಪತ್ತಾರ, ಬಸವರಾಜ ರತ್ತಾಳ, ಅರುಣಕುಮಾರ ಗಾಂಜಿ, ಯಲ್ಲಪ್ಪ ಕಿರದಳ್ಳಿ, ರಮೇಶ ಕೋಲ್ಕರ್, ಹುಸನಪ್ಪ ಅಜ್ಜಕೊಲ್ಲಿ, ಮಂಜುನಾಥ ಅಲಬಾನೂರ್, ಸತೀಶ ತೊನ್ಸಳ್ಳಿ, ಪ್ರಭು ದೊಡ್ಡಮನಿ, ಸಾಯಬಣ್ಣ ನಾಶಿ, ಅಮರೇಶ ಕೊಂಬಿನ್, ನಿಖಿಲï ಸಗರಕರ್, ಕಾಶಪ್ಪ ಹಳಿಸಗರ, ರಾಜು ಪಂಚಭಾವಿ, ಸಂಗಮೇಶ ಕುಂಬಾರ ಇತರರಿದ್ದರು.