ಬೀದಿ ಬದಿ ವ್ಯಾಪಾರಿಗಳ ಸಂಘ ಉದ್ಘಾಟನೆ

24M.D.R.2
Published on

ಮದ್ದೂರು: ಶ್ರೀ ಕ್ಷೇತ್ರದಿಂದ ಪೂಜ್ಯರು ಮಹಿಳೆಯರ ಆರ್ಥಿಕತೆಯನ್ನು ಸದೃಢಗೊಳಿಸಲು ವಿವಿಧ ಉದ್ದೇಶಗಳಿಗ ಪ್ರಗತಿ ನಿಧಿ ನೀಡುತ್ತಿರುವುದು ಹರ್ಷದಾಯಕ ವಿಷಯ ಎಂದು ಪ್ರಾದೇಶಿಕ ನಿರ್ದೇಶಕಿ ದೀಪಾ ಮೆಚ್ಚುಗೆ ವ್ಯಕ್ತಪಡಿಸಿದರು.


ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಆರಣದಲ್ಲಿರುವ ವ್ಯಾಖ್ಯಾನ ಮಂಟಪದಲ್ಲಿ ಬುಧವಾರ ಬೀದಿ ಬದಿ ವ್ಯಾಪಾರಿಗಳ ಸಂಘ ಉದ್ಘಾಟನೆಯೊಂದಿಗೆ ಪ್ರಗತಿ ನಿಧಿ ಚೆಕ್ ವಿತರಣೆ, ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ, ಪ್ರಗತಿ ನಿಧಿ ಪರಿಶೀಲನಾ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ವಿಶೇಷವಾಗಿ ಬೀದಿ ಬದಿ ವ್ಯಾಪಾರಿಗಳ 2 ಸಂಘ ಉದ್ಘಾಟನೆಯನ್ನು ಮಾಡಲಾಗಿದ್ದು, ಬೀದಿಬದಿ ವ್ಯಾಪಾರಿಗಳ ಪ್ರಗತಿಯತ್ತ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಸಂಘವು ಗಮನಹರಿಸುತ್ತಿದ್ದು ಆರ್ಥಿಕ ಸಹಾಯ ಮಾಡಲು ಮುಂದಾಗಿದೆ ಎಂದರು.
ಬೀದಿ ಬದಿ ಸೊಪ್ಪು, ತರಕಾರಿ, ವ್ಯಾಪಾರ ಮಾಡುತ್ತಿದ್ದ ಎಲ್ಲಮ್ಮದೇವಿ ಸಂಘದ ವಿಜಯಲಕ್ಸ್ಮಿಅವರಿಗೆ ಸೊಪ್ಪು ಮತ್ತು ತರಕಾರಿ ವ್ಯಾಪಾರಕ್ಕೆ 2 ಲಕ್ಷ ರೂ. ಚೆಕ್ ವಿತರಣೆ ಮಾಡಲಾಯಿತು. ಅದೇ ರೀತಿ ಯೋಜನೆಯ ಸದಸ್ಯರ ಮಕ್ಕಳಿಗೆ ವೃತ್ತಿಪರ ಶಿಕ್ಷಣಕ್ಕೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪಡೆದ ತಾಲೂಕಿನ 60 ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ಹಸ್ತಾಂತರಿಸಲಾಯಿತು.


ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರ ಪ್ರಗತಿ ಪರಿಶೀಲನೆ ನಡೆಸಿ ಹಿಂದಿನ ವರ್ಷ ಸಾಧನೆ ಮಾಡಿದ ಎಲ್ಲ ಕಾರ್ಯಕರ್ತರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರು, ತಾಲೂಕಿನ ಯೋಜನಾಧಿಕಾರಿಯವರು, ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರಾದ ವೆಂಕಟೇಶ ಮತ್ತು ಮಕ್ಬುಲ್ ಪಾಷಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net